ದುಂಬಿ ದುಂಬಿ - The Indic Lyrics Database

ದುಂಬಿ ದುಂಬಿ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Munjaneya Manju | वर्ष - 1993

Song link

View in Roman

ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗು ದುಂಬಿ ಆಯ್ತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಇಂದು ರಾತ್ರಿ ಇಲ್ಲೆ ನಿಂತರೆ ಅನುಕೂಲ

ಆಗದು ಹೂಯ್ ಆಗದು ಹೋಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್
ಜಾಣನಾಗಿ ಊರು ಸೇರಿಕೋ

ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಇಂದು ರಾತ್ರಿ ಇಲ್ಲೆ ನಿಂತರೆ ಅನುಕೂಲ
ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗು ದುಂಬಿ ಆಯ್ತು ಸಾಯಂಕಾಲ

ಆಗದು ಹೂಯ್ ಆಗದು ಹೋಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್
ನನ್ನ ಮುತ್ತು ವೊತ್ತೇ ಇಟ್ಟುಕೋ

ಊರೇಕೆ ದುಂಬಿಗೆ ಸೂರೆಕೆ ದುಂಬಿಗೆ
ಮಲ್ಲಿಗೆ ಮನದುಂಬಿ ಹಾಡು ಜಾಗ
ಹಾಡಿನ ಮದ್ಯೆ ಜೇನು ಹೀರೋ ಯೋಗ
ಜಾಣ ಜಾಣ ನೀನು ಹಾಡಿನ ಬಾಣ ಹೂಡುವೆ
ಜೀವ ಜಾರೋವಾಗ ಅರ್ಧ ಪ್ರಾಣ ಕೊಡುವೆ

ಅಂಜುವೆಯೆಕೆ ಮಲ್ಲೆ ಕಂಪಿನ ತೋಟದಲ್ಲಿ
ಉತ್ತಮನಾಗಿ ಓಡುವೆ
ಮಾನವ ಮಲ್ಲೇ ನಾನು
ನಾಚಿಕೆ ಕಾಡದೆನು
ಕತ್ತಲಿಗಾಗಿ ನಾ ಬೇಡುವೆ

ಆಗದು ಹೂಯ್ ಆಗದು ಹೋಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್
ಕಣ್ಣು ಮುಚ್ಚಿ ಕತ್ತಲೆಂದುಕೋ

ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗು ದುಂಬಿ ಆಯ್ತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಇಂದು ರಾತ್ರಿ ಇಲ್ಲೆ ನಿಂತರೆ ಅನುಕೂಲ

ಬಾ ನನ್ನ ಹತ್ತೀರ ಬಾ ಇನ್ನು ಹತ್ತೀರ
ಹತ್ತೀರ ಬಂದ ಮೇಲೆ ಹೆಚ್ಚಬೇಡ
ಮೆಚ್ಚಿನ ರಸಲೀಲೆ ನೆಂಚಬೇಡ

ಮಾತು ಮತ್ತೂ ಮುತ್ತು ಈಗ ಸಾಲ ನೀಡು
ಅಂತರಂಗ ಒಪ್ಪಿದಾಗ ಪ್ರೀತಿ ಮಾಡು
ತನ್ನನೆ ಗಾಳಿಯಂತ ಸಂಜೆಯ ರಂಗಿನಂತ
ದುಂಬಿಯ ಹಾದಿಗೆ ಸೋಲೆನು
ಮಾಗಿಯ ಕಾಲದಂತ ಮಾವಿನ ಹೂವಿನಂತ
ಹೆಣ್ಣಿನ ಕಂಪು ನಾ ತಾಳೆನು

ಆಗದು ಹೂಯ್ ಆಗದು ಹೋಯ್
ಹಾಗಾಗದು ಹೊಯ್ಯ್ ಹಾಗಾಗದು ಹೊಯ್
ಹಣ್ಣು ತಿಂದು ಹೆಣ್ಣು ಅಂದುಕೋ

ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗು ದುಂಬಿ ಆಯ್ತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ
ಇಂದು ರಾತ್ರಿ ಇಲ್ಲೆ ನಿಂತರೆ ಅನುಕೂಲ