ಎತ್ತ ತಿರುಗಲಿ ಕಣ್ಣು - The Indic Lyrics Database

ಎತ್ತ ತಿರುಗಲಿ ಕಣ್ಣು

गीतकार - Kuvempu | गायक - K. S. Chithra | संगीत - Sadhu Kokila | फ़िल्म - Kavya | वर्ष - 1995

Song link

View in Roman

ಎತ್ತ ತಿರುಗಲಿ ಕಣ್ಣು ನಿನ್ನ ಆಹಾ ಹಾ ಹಾ
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂಡೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ

ಎತ್ತ ತಿರುಗಲಿ ಕಣ್ಣು

ಮುತ್ತಾಡುವ ತುಟಿಗೊಂಡೆ ನಿನ್ನ ಕೆನ್ನೆಯಾಸೆ
ಆಳಂಗಿಸೋ ತೋಳ್ಗೊಂಡೆ ನಿನ್ನ ವಕ್ಷದಾಸೆ
ಮುತ್ತಾಡುವ ತುಟಿಗೊಂಡೆ ನಿನ್ನ ಕೆನ್ನೆಯಾಸೆ
ಆಳಂಗಿಸೋ ತೋಳ್ಗೊಂಡೆ ನಿನ್ನ ವಕ್ಷದಾಸೆ
ಮಲ್ಲೆ ಮಲ್ಲಿಗೆ ರಾಶಿ ಮೈಯನಪ್ಪುವ ಆಸೆ
ಜೀವ ದುಂಬಿಗೆ ಮೂಸಿ ತನಿವನೊಪ್ಪದಸೆ

ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎತ್ತ ತಿರುಗಲಿ ಕಣ್ಣು

ಉಸಿರು ಉಸಿರೊಳು ನಿನ್ನ ಒಳಗೆ ಕೊಳ್ಳುವಾಸೆ
ಉಸಿರು ಉಸಿರು ನಿನ್ನೊಳು ಐಕ್ಯವಾಗುವಾಸೆ
ಉಸಿರು ಉಸಿರೊಳು ನಿನ್ನ ಒಳಗೆ ಕೊಳ್ಳುವಾಸೆ
ಉಸಿರು ಉಸಿರು ನಿನ್ನೊಳು ಐಕ್ಯವಾಗುವಾಸೆ
ಹೀರಿದಾಯ್ತು ಹೀರಿ ಸೇರಿಹೋಗುವಾಸೆ
ಸೇರಿಹೋಗುವಾಸೆ ಸೇರಿಹೋಗುವಾಸೆ

ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
ಎನ ನೆನೆಯಲಿ ಚಿತ್ತ ನಿನ್ನ ಚಿಂತಿಪಾಸೆ
ನುಡಿವ ನಾಲಗೆಗೊಂಡೆ ನಿನ್ನ ಹೆಸರಿನಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಮಣಿವ ಹಣೆಗೆ ಇಹುದೊಂದೆ ನಿನ್ನ ಚರಣದಾಸೆ
ಎತ್ತ ತಿರುಗಲಿ ಕಣ್ಣು