ಕಾಲದ ಕೈಯೊಳಗೆ - The Indic Lyrics Database

ಕಾಲದ ಕೈಯೊಳಗೆ

गीतकार - Hamsalekha | गायक - Dr. Rajkumar | संगीत - Hamsalekha | फ़िल्म - Munjaneya Manju | वर्ष - 1993

Song link

View in Roman

ಮನೆ ಮುಂದೆ ಸೀಗೆ ಬೆಳ್ಳಿ ಬೇಡ
ಇದ್ರೂ ಮೇಲೆ ಬತ್ತೇನ್ ಹಾಕೋದ್ ಬೇಡ
ವೇದ ಸುಳ್ಳು ಅದ್ರೆ ಗಾದೆ ಸುಳ್ಳೆ
ಹೂವೇ ಇದ್ರು ಬೆಳಿ ತುಂಬ ಮುಳ್ಳೆ

ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ

ಬೇವಿನ್ ಗಿಡಕೆ ಬೆಲ್ಲ ಸುರಿಯೋದ್ ದಂಡ
ಗಂಡ ಬಿಟ್ಟ ಹೆಣ್ಣು ಸೇರಗಿನ ಕೆಂಡ

ಮನವೆಂಬ ಬನಕೆ ಮದುವೆ ಬೆಳಿಯ
ಬಿಗಿದಿರುವುದು ಯೇಕೆ ಎಂದು ಅರಿತೆಯ

ನಗೋ ಹೆಣ್ಣು ಆಲೋ ಗಂಡು ಒಂದೇ
ನಂಬಿ ಮೋಸ ಹೋದ್ರೆ ತಪ್ಪು ನಮ್ದೆ

ಪರ ನಾರಿಯ ನೋಡದಿರಲು ಗಂಡಸು
ಜೊತೆಯಾದಳು ತಾಳಿ ಹೊರುವ ಹೆಂಗಸು
ನಿನ್ನ ಮನೆ ನಿನ್ನ ಪತಿ ಅಂಕೆಯಲಿ
ಜೀವ ಕೊಡೋ ಗೆಲತಿಯರು ಶಂಕೆಯಲಿ

ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ

ತಲೆ ಬಾಗಿಲ್ ದಾನ ಕೊಡೋದ್ ಯಾಕೆ
ರಾತ್ರಿ ಪೂರ ಜಗಲಿ ಕಾಯೋದ್ ಯಾಕೆ

ಅತಿ ಪ್ರೀತಿಯ ಮಾಡೋ ಮನಸು ನಿನ್ನದು
ಕೆಡಬಹುದು ಎನುವ ಮನಸು ಅವನದು

ಸಾಲ್ಗೆ ಕೊಟ್ರೆ ನಾಯಿ ಮಾಡ್ಕೆನ್ ಮುಟ್ಟು
ಅಯ್ಯೋ ಅಂದ್ರೆ ಶಾಪ ನೆತ್ತಿಗ್ ಯೇರ್ತು

ನೆಲೆ ಕಾಣದ ಹೆಣ್ಣು ಮನಸು ಅವಳದು
ಅಪವಾದವ ಹುಡುಕೋ ಮನಸು ಜನರದು
ಹೇಳಿದರೇ ಕೆಳದಿರೋ ಮರಣ ಮನಸು
ಜಾರಿದರೆ ಉಳಿಯುವುದು ಪ್ರೇಮದ ಕನಸು

ಕಾಲದ ಕೈಯೊಳಗೆ ನಾವ್ ಬೊಂಬೆಗಳಮ್ಮ
ಬೊಂಬೆಗಳ ಕಾಯಕವೇ ಕುಣಿಯುವುದಮ್ಮ
ಮನಸಿನ ಕೈಯೊಳಗೆ ನಾವ್ ಮಾನವರಮ್ಮ
ಮಾನವರ ಕಾಯಕವೇ ಮಣಿಯುವುದಮ್ಮ