ಕೋಗಿಲೆಯೇ ಕ್ಷೇಮವೇ - The Indic Lyrics Database

ಕೋಗಿಲೆಯೇ ಕ್ಷೇಮವೇ

गीतकार - Hamsalekha | गायक - S. Janaki | संगीत - Hamsalekha | फ़िल्म - Mannina Doni | वर्ष - 1992

Song link

View in Roman

ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ

ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ ಮಲ್ಲಿಗೆಯೇ ಮಂಪಾರೆ
ಏಳಿರಿ ಏಳಿರಿ ಮೇಲೆ ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾದಿ
ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ ಮಲ್ಲಿಗೆಯೇ ಮಂಪಾರೆ

ಕಾನನದಲ್ಲಿ ಬೀಸುವ ಗಾಳಿಗೆ ಎಂದು
ಆಲಸ್ಯ ಬಂದಿದೆ ಹೇಳಿ
ಬೆಟ್ಟಗಳಲ್ಲಿ ಓದುವ ನದಿಯು ಎಂದು
ದನಿದು ನಿಂತಿದೆ ಕೇಳಿ
ರಾಗಗಳಂತೇ ಮೂಡುವ ಮೇಘಗಳಿಗೆ
ಬೇಸರ ಬಂದಿತ್ತೇ ಕೇಳಿ
ವೀರರ ಕೈಲಿ ಬಗ್ಗದ ಮಳೆಬಿಲ್ಲು
ಬರನು ಎಂಬುದೇ ಹೇಳಿ
ಭುವನ ತಿರುಗಿದೆ ಊ ಊ ಗಗನ ಚಾಳಿಸಿದೆ
ಕವನ ಕಡೆದೆ ಊ ಬದುಕು ಬರೆಸಿದೆ

ಏಳಿರಿ ಏಳಿರಿ ಮೇಲೆ ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾದಿ
ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ ಮಲ್ಲಿಗೆಯೇ ಮಂಪಾರೆ

ಜನರ ಗುಂಪು ಕಂಪಿನ ತೋಟಕ್ಕೆ ಹರಿ
ಸೊಂಪಿನ ಜೇನನ್ನು ತಾಂಡವು
ಪುಂಡರ ಗುಂಪು ಹುಲಿಯ ತೋಪಿಗೆ ನುಗ್ಗಿ
ಹೊಟ್ಟೆಯ ಬಿರಿಯೇ ತಿಂದವು
ತಪ್ಪಲಿನಲ್ಲಿ ರಂಗಿನ ಅಕ್ಕಿಯ ಹೊಯ್ದ
ಪಥಂಗ ಪಡೆಯ ಪಯಣ
ಕೆಚ್ಚಲಿನಳ್ಳಿ ಗೋವಿನ ಕೂಸಿನ ದೊಡ್ಡ
ಕಣ್ಣಿನ ಮೆಚ್ಚಿನ ಮೌನ
ಕಮಲಾ ಕುಳಿತೇಯ ಊ ಅಲೀಲೆ ಅವಿತೇಯಾ
ನವಿಲೆ ನಿಂತೆಯ ಊ ಮನಸೇ ಮರೆತೆಯ

ಏಳಿರಿ ಏಳಿರಿ ಮೇಲೆ ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾದಿ
ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ ಮಲ್ಲಿಗೆಯೇ ಮಂಪಾರೆ

ಕೋಗಿಲೆಯೇ ಕ್ಷೇಮವೇ ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ ಮಲ್ಲಿಗೆಯೇ ಮಂಪಾರೆ