ಚಂದ ಚಂದ - The Indic Lyrics Database

ಚಂದ ಚಂದ

गीतकार - Pramod Maravante | गायक - Ravi Basrur, Anuradha Bhat | संगीत - Ravi Basrur | फ़िल्म - Anjaniputra | वर्ष - 2017

Song link

View in Roman

ಭಾರಿ ಕುಶಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ

ಭಾರಿ ಕುಶಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ
ಟಿವಿ ರೇಡಿಯೋ ಎಂಥಾ ಬೇಡ ಅವ್ಳು ಮನೆಗಿದ್ರೆ
ಅವ್ಳು ಉಂಬ್ತೆ ಇಲ್ಲ ಕಣಿ ನಾನು ಊಟ ಮಾಡ್ದೆ
ನಾನ್ ಕಿಂತ ಚೂರು ದಪ್ಪ ಆರು ನಂಗೆ ಅದ್ದಿಲ್ಯೆ
ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವ್ಳು ಸೀರೆ ಉತ್ಕೋಬಂದು ಎದ್ರಿಗ್ ಒಂಬತ್ತ್
ಕೂಡ್ಲೆ ಮನ್ಸ್ ಹೇಳತ್ ಒಂದು ಮಾತು

ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುಡಿಲಿ ಸೊಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂಥ ಗಂಡನಿಗೆ ಅವ್ಳೆ ಆಸ್ತಿ

ಮನೆಯ ಬಾಗಿಲಲ್ಲಿ ಮನದಂಗಲದಳ್ಳಿ
ರಂಗೋಲಿ ಇಡುವ ಕೈಯ್ಯ ಹ್ಯಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಲಗೆ ಇಳಿದು
ಎಷ್ಟೂ ಚಂದ ಕಾಣ್ತಾಳೆ ಹ್ಯಂಗೆ ಹೇಳಲಿ
ಧರ್ಮ ಧರ್ಮಕ್ಕೆ ಕಣ್ಣಲ್ಲಿ ಬೈಯ್ಯೋ ಮಾತು
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಊರ ಮಾತು ಕೇಳಿ ಕೆಟ್ಟು ಬದುಕು ದೊಂಬರಾಟ ಆದ್ರು
ಸಾಯೋ ತಂಕ ಹೆಗಲ ನೀಡೋ ವಿಶ್ವ ಸುಂದರಿ
ಎಷ್ಟೆ ಬ್ಯೂಟಿ ಎದುರು ಕಂಡ್ರು ನನ್ನ ಹೆಂಡ್ತಿನ್
ಕಂಡು ಮನಸು ಹೇಳತ್ ಒಂದು ಮಾತು

ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುಡಿಲಿ ಸೊಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂಥ ಗಂಡನಿಗೆ ಅವ್ಳೆ ಆಸ್ತಿ

ಭಾರಿ ಕುಶಿ ಮಾರ್ರೆ ನಂಗೆ ನನ್ ಗಂಡ ಅಂದ್ರೆ
ಕೆನ್ನೆ ಕೆಂಪ್ ಆತ್ ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥಾ ಬ್ಯಾಡ ಅವ್ರ್ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ್ ಅವ್ರು ಒಮ್ಮೆ ನಕ್ರೆ
ನಾನ್ ಕಿಂತ ಮಾತು ಕಮ್ಮಿ ಆರು ನಂಗೆ ಅದ್ದಿಲ್ಯೆ
ಹೆಂಡ್ತಿ ಮಾತು ಕೆಂಬೋ ಗಂಡ ಸಿಕ್ರೆ ಸಾಕಲ್ಲೆ
ಅವ್ರು ಪಂಚೆನ್ ಎತ್ತಿ ಕಟ್ಟಿ ಕಣ್ಣು ಹೊಡ್’ದ ಕೂಡಲೆ
ಮನ್ಸ್ ಹೇಳತ್ ಒಂದ್ ಮಾತ್ತ್

ಚಂದ ಚಂದ ಚಂದ ಚಂದ ನನ್ನ ಗಂಡ
ಕಣ್ಣಿನಾಗೆ ಸಣ್ಣೆ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ನ ಗಂಡ
ಬೈದ್ರುನು ಮತ್ತೇ ನನ್ನ ಒಪ್ಪಿಕೊಂಡ