ನನ್ನ ಹಾಡು ನನ್ನದು - The Indic Lyrics Database

ನನ್ನ ಹಾಡು ನನ್ನದು

गीतकार - Chi. Udaya Shankar | गायक - S. P. Balasubramanyam | संगीत - Rajan-Nagendra | फ़िल्म - Suprabhatha | वर्ष - 1988

Song link

View in Roman

ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನೂ ಇರುವೆನು ನುಡಿವೆನು
ನಡೆವೆನು ದುಡಿವೆನು ಈ ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ನೋಡು ನೀಲಿ ಬಾನಿಗೆ ಮೋಡ ಅಂದ ತುಂಬಿದೆ
ಹಕ್ಕಿ ಹಾಡಿ ಹಾರಿದೆ ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಡಿದೆ ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನಮಗೇ ತಾಣೆ

ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

ನೂರು ಜನ ಬಂದರು ನೂರು ಜನ ಹೋದರು
ನನಗೇ ನಾನೇ ಸಂಗಾತಿಯು ನಾನೆಂದು ಸುಖ ಜೀವಿಯು

ನೂರು ಜನ ಬಂದರು ನೂರು ಜನ ಹೋದರು
ನನಗೇ ನಾನೇ ಸಂಗಾತಿಯು ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆ ಸುರಿದರು
ನನಗೇ ಎಲ್ಲ ಸಂತೋಷವೇ ದಿನಕೊಂದು ಹೊಸ ನೋಟವೇ
ಹಗಲು ಇರುಳು ಸೊಗಸು ತಾನೆ

ಎಲ್ಲೆಲ್ಲಿಯು ಎಂದೆಂದಿಗು ಎಲ್ಲೆಲ್ಲಿಯು ಎಂದೆಂದಿಗು
ನನ್ನಂತೆ ನಾನೂ ಇರುವೆನು ನುಡಿವೆನು
ನಡೆವೆನು ದುಡಿವೆನು ಈ ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು