ಯಾವ ಕಾಣಿಕೆ ನೀಡಲಿ ನಿನಗೆ - The Indic Lyrics Database

ಯಾವ ಕಾಣಿಕೆ ನೀಡಲಿ ನಿನಗೆ

गीतकार - S. R. Ekkundi | गायक - S. P. Balasubrahmanyam | संगीत - Vijaya Bhaskar | फ़िल्म - Masanada Hoovu | वर्ष - 1985

Song link

View in Roman

ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ

ಮಲೆನಾಡ ಕಣಿವೆಗಳ ಹಸಿರು ಬಾನದಿಂದ
ನಿನಗಾಗಿ ಗಿಣಿ ಒಂದ ನಾ ತರಲಾರೆ
ಮಲೆನಾಡ ಕಣಿವೆಗಳ ಹಸಿರು ಬಾನದಿಂದ
ನಿನಗಾಗಿ ಗಿಣಿ ಒಂದ ನಾ ತರಲಾರೆ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಹಂಸನಾದೆಯ ನಾ ತರಲಾರೆ

ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ

ಹಕ್ಕಿಗಳ ಜೊತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ
ಹಕ್ಕಿಗಳ ಜೊತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ
ನಂದನವನದ ಮಂದಾರ ಪುಷ್ಪವ
ನಂದನವನದ ಮಂದಾರ ಪುಷ್ಪವ
ನಾ ನಿನಗೆ ತರಲಾರೆ

ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ

ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ
ಹಲವು ಅರಸಿಯರ ಹೊತ್ತು ಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ
ಮಣ್ಣಿನಲಿ ನೀರಿನಲಿ ಬದುಕನೆ ಇಟ್ಟಿರುವ
ಮಣ್ಣಿನಲಿ ನೀರಿನಲಿ ಬದುಕನೆ ಇಟ್ಟಿರುವ
ಸೂರ್ಯ ಚಂದ್ರರ ನಾ ತರಲಾರೆ

ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಊ ಎನ್ನ ಪ್ರೇಯಸಿ