ನೀಲಾ ಮೇಘಾ ಶ್ಯಾಮ - The Indic Lyrics Database

ನೀಲಾ ಮೇಘಾ ಶ್ಯಾಮ

गीतकार - R. N. Jayagopal | गायक - Vani Jayaram and P. Susheela | संगीत - M. S. Viswanathan | फ़िल्म - Eradu Rekhegalu | वर्ष - 1984

Song link

View in Roman

ನವರಾತ್ರಿ ಸಂಜೆಯಲಿ ನನ್ನೆದೆಯ ಹಾಡಿನಲಿ
ಪ್ರಶ್ನೆಯೊಂದು ಮೂಡಿಹುದು ನೋಡಮ್ಮ
ನವರಾತ್ರಿ ಸಂಜೆಯಲಿ ನಾ ನುಡಿವ ಮಾತಿನಲಿ
ಉತ್ತರವು ಅಡಗಿರುವುದು ಕೇಳಮ್ಮ

ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗೆ ಈ ರುಕ್ಮಿಣಿಗಾಗೆ
ಅವನ ಮಧುರ ಮುರುಳಿಯು ಮಿಡಿವ ಸವಿಯ ನವಲಿಯು
ಆ ಸತಿಗಾಗೆ ಕುಲಸತಿಗಾಗೆ

ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ಇಬ್ಬರಿಗಾಗೆ ಎಂಡು ಇಬ್ಬರಿಗಾಗೆ
ಸೊಬಾಗಿ ಸತ್ಯಭಾಮೆ ರುಕ್ಮಿಣಿಯರು ಇಬ್ಬರು
ಒಬ್ಬನಿಗಾಗೇ ಅವನೊಬ್ಬನಿಗೇ

ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗೆ ಈ ರುಕ್ಮಿಣಿಗಾಗೆ

ತನ್ನ ಪೂಜೆಗೈದ ಗಿರಿಜೆ ತಾಪಕೆ ಮೆಚ್ಚಿದ
ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ
ಪ್ರೀತಿ ಇಂದ ಬಂದ ಗಂಗೆ ಅಂದ ಮೆಚ್ಚಿದ
ತನ್ನ ಶಿರದ ಮೇಲೆ ಅವಳ ಹರನು ಇಡಿಸಿದ

ಒಂದೆ ಮ್ಯಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ
ಒಂದೆ ಮ್ಯಾಲೆ ಇಬ್ಬರಿಗಿಯುವುದು ದೇವರ ನಿಜ ನೀತಿ
ಅದು ಅಂದಿನ ಕಥೆಯಮ್ಮ ಇದು ನಿತ್ಯದ ಕಥೆಯಮ್ಮ
ಆಡು ಬೊಂಬೆ ಮದುವೆಯಮ್ಮ ಇದು ಸತ್ಯದ ಮದುವೆಯಮ್ಮ

ನೀಲಾ ಮೇಘ ಶ್ಯಾ... ಯಾಕಮ್ಮ ನಿಲ್ಸ್ಬಿಟ್ಟೆ ಹಾಡು
ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗೆ ಈ ರುಕ್ಮಿಣಿಗಾಗೆ

ಮಲ್ಲೇ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು
ಎಂದು ಅವಳ ಬಿಟ್ಟು ನೋಡ ಬೇರೆ ಯಾರನು
ನಲ್ಲ ನೆಟ್ಟ ಪ್ರೀತಿ ಬಲ್ಲಿ ಎರಡು ತೋಟಡಿ
ಎರಡು ಬಲ್ಲಿ ತಂದ ಹೂವು ಎಲ್ಲ ಅವನದೇ
ಒಂದೆ ಒಡಲ ಎರಡು ಪ್ರಾಣ ಒತ್ತಿಗೆ ಇರಬಹುದೆ
ಒಂದೆ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪಹುದೆ?
ಇಡಕುಠಾರ ಏನಿದೆಯೋ
ಕಂಬನಿಗೆ ಕೊನೆಯಿದೆಯೊ
ಇದು ವಿಧಿಯ ಚೆಲ್ಲಾಟ ಇದು ಬಾಳಿನ ಹೋರಾಟ

ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗೆ ಈ ರುಕ್ಮಿಣಿಗಾಗೆ
ನೀಲಾ ಮೇಘಾ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗೆ ಈ ರುಕ್ಮಿಣಿಗಾಗೆ