ಗಂಗೆಯ ಕರೆಯಲಿ - The Indic Lyrics Database

ಗಂಗೆಯ ಕರೆಯಲಿ

गीतकार - R. N. Jayagopal | गायक - S. P. Balasubrahmanyam and Vani Jayaram | संगीत - M. S. Viswanathan | फ़िल्म - Eradu Rekhegalu | वर्ष - 1984

Song link

View in Roman

ಗಂಗೆಯ ಕರೆಯಲಿ ಹೃದಯದ ಸಂಗಮ
ಎದೆಯಲಿ ಅರಿಯದ ನೂತನ ಸಂಭ್ರಮ
ಗಂಗೆಯ ಕರೆಯಲಿ ಹೃದಯದ ಸಂಗಮ
ಎದೆಯಲಿ ಅರಿಯದ ನೂತನ ಸಂಭ್ರಮ

ಬಂದೆ ನೀನು ತಂಗಳಿಯಾಳು ಈ ಬಾಳಲಿ
ಪ್ರೀತಿ ಹೂವ ಸೌರಭ ಚೆಲ್ಲಿ ಈ ನಗೆಯಲಿ
ಅಚ್ಚಾ
ಕಾಶಿ ಮಡಿಲ ಕಣ್ಣೆ ಮನದ ಹೂತೋಟದಿ
ಕಸ್ತೂರಿ ಕನ್ನಡದಿಂಪು ನೀ ಸೂಸಿದೆ
ನಿನ್ನ ಹೃದಯ ಸೌಧದಲ್ಲಿ ನಾ ನೆಲೆಸಿದೆ
ನಿನ್ನ ಹೃದಯ ಸೌಧದಲ್ಲಿ ನಾ ನೆಲೆಸಿದೆ
ನಿನ್ನ ಒಲವ ಅಲೆಯ ಮೇಲೆ ನಾ ತಿಳಿಯದೆ
ನಿನ್ನ ಒಲವ ಅಲೆಯ ಮೇಲೆ ನಾ ತಿಳಿಯದೆ

ಗಂಗೆಯ ಕರೆಯಲಿ ಹೃದಯದ ಸಂಗಮ
ಎದೆಯಲಿ ಅರಿಯದ ನೂತನ ಸಂಭ್ರಮ

ಜೀವ ಜೀವ ಒಂದಾದಾಗ ಆನಂದವು
ಜನ್ಮ ಜನ್ಮ ಬಾಂಧವು ನುಡಿದ ಸಂಗೀತವು
ಅಚ್ಚಾ
ಇಂದು ಕಂಡ ಈ ಸುಖವೆಂದು ಸ್ಥಿರವಾಗಲಿ
… ಹೀಗೇ ನಿಂತು ಸುಖ ನೀಡಲಿ
ವಿಶ್ವನಾಥ ಸಾಕ್ಷಿ ನಮ್ಮ ಈ ಪ್ರೇಮಕೇ
ವಿಶ್ವನಾಥ ಸಾಕ್ಷಿ ನಮ್ಮ ಈ ಪ್ರೇಮಕೇ
ಹೂ ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೇ
ಸೂರ್ಯ ಚಂದ್ರ ಸಾಕ್ಷಿ ನಮ್ಮ ಮಧುರ ಬಂಧಕೇ

ಗಂಗೆಯ ಕರೆಯಲಿ ಹೃದಯದ ಸಂಗಮ
ಎದೆಯಲಿ ಅರಿಯದ ನೂತನ ಸಂಭ್ರಮ
ಅಚ್ಚಾ