ಮತ್ತೆ ಮತ್ತೆ ನೆನಪು - The Indic Lyrics Database

ಮತ್ತೆ ಮತ್ತೆ ನೆನಪು

गीतकार - Hrudaya Shiva | गायक - Chethan Naik | संगीत - Naveen Sajju | फ़िल्म - Kanaka | वर्ष - 2017

Song link

View in Roman

ಮತ್ತೆ ಮತ್ತೆ ನೆನಪು ಕಾಡಿದೆ ಬಿಟ್ಟು ಬಿಡದೆ ಜೀವ ಹಿಂದಿದೆ
ಕಟ್ಟ ಕಡೆಗೆ ಅದೇ ದಾರಿಯಲಿ ಪಯಣ ಸಾಗಿದೆ
ಕೊನೆಗೆ
ಹೆತ್ತವರ ನೆನಪು ಕಾಡಿದೆ ಮತ್ತೆ ಮತ್ತೆ ಕೂಗಿ ಕರೆದಿದೆ
ಮುತ್ತು ಕೊಟ್ಟ ಪುಟ್ಟ ಹುಡುಗಿಯ ನೆನಪು ಮೂಡಿದೆ
ನನಗೇ
ಚಿಟ್ಟೆಯ ಹಿಡಿದ ನೆನಪು ಜೋಕಾಲಿ ಆಡಿದ ನೆನಪು
ಕಂಬನಿ ಒರೆಸಿದ ನೆನಪು ಸಾಂತ್ವನ ಹೇಳಿದ ನೆನಪು
ಯಾಕೋ ನನ್ನೆದೆಯನಿಂದು ಇರಿಯುತಿದೆ
ಯಾಕೋ ಕನ್ನಲಿ ಹನಿಯ ತರಿಸುತಿದೆ
ಈಗ ಎಲ್ಲಿದ್ದಾಳೋ ಹೇಗಿದ್ದಾಳೋ ನನ್ನ ಪಾಲಿನ ದೇವತೆ

ಮತ್ತೆ ಮತ್ತೆ ನೆನಪು ಕಾಡಿದೆ ಬಿಟ್ಟು ಬಿಡದೆ ಜೀವ ಹಿಂದಿದೆ

ನಾನೂ ಹುಟ್ಟಿದ ಆ ಮನೆ ನಾನೂ ಬೆಳೆದ ಅಂಗಲಾ
ನಾನೂ ಆಡಿದ ಹೊಲದಂಡೆ ಈಗ ಹೇಗಿದೆಯೋ
ದಿನಾ ಬೈಯುತ್ತಿದ್ದ ನನ್ನಪ್ಪ ತುತ್ತು ತಿನ್ನಿಸಿದ ನನ್ನವ್ವ
ಒಂದೆ ಎದೆ ಹಾಲು ಕುಡಿದ ತಮ್ಮಯ್ಯ ಹೇಗಿಹನೋ
ಯಾಕೋ ಎಲ್ಲ ನೆನಪಾಗುತಿದೆ ಹಳೆಯ ಪುಟ ಪುನಃ ತೇರಿದೆ
ಎಲ್ಲಿಂದಾ ಆರಂಭನೋ ಜೀವನ ಹೇ ಎಲ್ಲಿಂದ ಆರಂಭನೋ ಜೀವನ
ಮಠದಲ್ಲೇ ಅದರ ನಿಲ್ದಾನ

ಮತ್ತೆ ಮತ್ತೆ ನೆನಪು ಕಾಡಿದೆ ಬಿಟ್ಟು ಬಿಡದೆ ಜೀವ ಹಿಂದಿದೆ

ನಮ್ಮೂರ ದಾರಿ ಮರಗಳು ನಮ್ಮೂರ ಕೆರೆ ಯೆರಿಯು
ನನ್ನ ಗುರುತನು ಇಂದು ಹಿಡಿಯಬಹುದೆ
ನಮ್ಮೂರ ಕೆಂಪು ಬಿಳಿ ಬಸ್ಸಿಗೆ ನಾ ಕೂರುತಿದ್ದ ಕೊನೆ ಸೀಟಿಗೆ
ನನ್ನ ನೆನಪು ಇನ್ನು ಇರಬಹುದೆ
ನಾನು ಅವಳು ಸುತ್ತಿದ ಜಾಗ ನೆನಪಿಗೆ ಬರುತಿದೆ ಈಗ
ಎಲ್ಲಿಂದಾ ಆರಂಭನೋ ಜೀವನ ಹೇ ಎಲ್ಲಿಂದ ಆರಂಭನೋ ಜೀವನ
ಮಠದಲ್ಲೇ ಅದರ ನಿಲ್ದಾನ

ಮತ್ತೆ ಮತ್ತೆ ನೆನಪು ಕಾಡಿದೆ ಬಿಟ್ಟು ಬಿಡದೆ ಜೀವ ಹಿಂದಿದೆ
ಕಟ್ಟ ಕಡೆಗೆ ಅದೇ ದಾರಿಯಲಿ ಪಯಣ ಸಾಗಿದೆ
ಕೊನೆಗೆ
ಕೊನೆಗೆ ಕೊನೆಗೆ