ಮೊದಲಾಸರಿ - The Indic Lyrics Database

ಮೊದಲಾಸರಿ

गीतकार - Hrudaya Shiva | गायक - Gowrav Hari | संगीत - Naveen Sajju | फ़िल्म - Kanaka | वर्ष - 2017

Song link

View in Roman

ಮೊದಲಾಸರಿ ನಿನ್ನನ್ನು ನೋಡಿದ ಆ ದಿನವು ಯಾವದು
ಕೊನೆಯ ಸರಿ ಹೇಳದೆ ಉಳಿದ ಆ ಮಾತು ಯಾವದು
ಮುದ್ದಾಡಿದ ದಿನಗಳು ಕಿತ್ತಾಡಿದ ಕ್ಷಣಗಳು
ಕದ್ದು ಸೀಬೆ ಕಾಯಿನ ಕಚ್ಚಿ ತಿಂದ ಕ್ಷಣಗಳು
ನಿನ್ನ ಮೊಗ್ಗಿನ ಜಡೆಯಲಿ ನನ್ನ ಕನಸು ಅರಳಿತು
ಕುಂಟೆಪಿಲ್ಲೆ ಆಡುತ್ತ ಕದ್ದು ಮುಚ್ಚಿ ನೋಡಿದ್ದು
ಎಲ್ಲ ಇಲ್ಲಿ ನಂಗೆ ನೆನಪಾಯ್ತಲ್ಲ ಸುಮ್ಗೆ
ನೀ ಚೆನ್ನಾಗಿದ್ರೆ ಅಷ್ಟೆ ನಂಗೆ
ಸಾಕಲ್ವಾ ಸಾಕಲ್ವಾ ಸಾಕಲ್ವಾ

ಉರುಳಿ ಹೋದ ಕಾಲ ಮತ್ತೆ ಮತ್ತೆ ಬರಲ್ವಾ
ಅರಳಿದಂಥ ಕನಸುಗಳಿಗೆ ಜೀವ ಸಿಗಲ್ವಾ
ಲಂಗ ದಾವನಿ ಗೆಜ್ಜೆ ಸದ್ದು ನೆನಪು ಆಗಲ್ವಾ
ಶಾಲೆಯ ಮುಂದೆ ನಂಗೋಸ್ಕರ ಕಾಯುತ್ತ ಕೂರಲ್ವ
ನೆನಪಿಲ್ಲೆ ಬದುಕಬೇಕು ನಾನು ಬಲ್ಲೆನು
ಗಡಿಯ ದಾಟಿ ಬರಲೇಬೇಡ ಕೈಯ್ಯೆ ಮುಗಿದೆನು
ಮುಗಿದು ಹೋದ ಕಥೆಗಳನ್ನು ಕೆದಕಬಾರದು
ಮರೆತ ಹಾಗೆ ನಟಿಸಬೇಕು ಮರೆಯಕೂಡದು

ಎಲ್ಲ ಇಲ್ಲಿ ನಂಗೆ ನೆನಪಾಯ್ತಲ್ಲ ಸುಮ್ಗೆ
ನೀ ಚೆನ್ನಾಗಿದ್ರೆ ಅಷ್ಟೆ ನಂಗೆ
ಸಾಕಲ್ವಾ ಸಾಕಲ್ವಾ ಸಾಕಲ್ವಾ

ನಾವು ನಡೆದ ಕಾಲು ದಾರಿ ತಾರು ಕಂಡಿಲ್ವಾ
ನಮಗೇ ಹೊಡೆದ ಗಣಿತ ಮೇಷ್ಟ್ರು ರಿಟೈರ್ಡ್ ಆಗಿಲ್ವಾ
ನಾನೂ ಕೊಟ್ಟ ನವಿಲುಗರಿ ಮಾರಿ ಹಾಕಿಲ್ವಾ
ನೀನು ಬರೆದ ಪ್ರೇಮ ಪತ್ರ ನನ್ಹತ್ರ ಇಲ್ವಾ
ಹೀಗೇ ಬಂದು ಹಾಗೆ ಹೋಗು ದಾರಿ ತಿರುವಾಲಿ
ನಡೆದುದೆಲ್ಲ ಉಳಿದು ಬಿಡಲಿ ಬಾಳ ಪುಟದಲಿ
ನೆನಪು ಕೊನೆಗೂ ಜಿನುಗಬೇಕು ಕಣ್ಣ ತುದಿಯಲಿ
ಯಾವುದಕ್ಕು ರುಣವು ಬೇಕು ಹಣೆಬರಹದಲ್ಲಿ

ಎಲ್ಲ ಇಲ್ಲಿ ಹಿಂಗೆ ನಾ ಉಳ್ಕೊಳ್ತಿರೋ ಹಾಂಗೆ
ನೀ ಚೆನ್ನಾಗಿದ್ರೆ ಅಷ್ಟೆ ನಂಗೆ
ಸಾಕಲ್ವಾ ಸಾಕಲ್ವಾ ಸಾಕಲ್ವಾ