ಪರದೆ ಎತ್ತಿ ಪನ್ನೀರ ಚೆಲ್ಲಿ - The Indic Lyrics Database

ಪರದೆ ಎತ್ತಿ ಪನ್ನೀರ ಚೆಲ್ಲಿ

गीतकार - Sriranga | गायक - S. P. Balasubrahmanyam, K. S. Chithra | संगीत - M. M. Keeravani | फ़िल्म - Swathi | वर्ष - 1994

Song link

View in Roman

ಪರದೆ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೊನೆ
ತುತಿಯ ಮೇಲೆ ತುತಿಯ ಒತ್ತಿ ಬಿಸಿಯ ಮುತ್ತು ಕೊಟ್ಟೊನೆ
ಪ್ರೇಮ ಮಂದಿರ ಕಟ್ಟೋಣ ಬಾ ಸುಖದ ಬಾಗಿಲ ತಟ್ಟೋಣ ಬಾ
ಎಲೆಯ ಪ್ರಾಯ ಅರಳಿದಾಗ ತುಂಬ ಬಿಸಿ ಬಿಸಿ ಬಯಕೆಯು ಎದೆಯೊಳಗೆ

ಪರದೆ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೊನೆ
ತುತಿಯ ಮೇಲೆ ತುತಿಯ ಒತ್ತಿ ಬಿಸಿಯ ಮುತ್ತು ಕೊಟ್ಟೊನೆ

ಕಣ್ಣು ಕಣ್ಣು ಕಲೆತು ಜೊತೆಗೆ ಜೀವ ಭಾವ ಬೆರೆತು
ಮನಸು ಮನಸು ಅರಿತು ನಲಿಯುತಲಿ ಲೋಕವನ್ನೇ ಮರೆಯಿತು
ತೊಳಲಿ ನನ್ನ ನಡುವಿನವನು ಬಲಸುತ
ಹರುಷದಿಂದ ಕುಲುಕುತ ಬಲುಕುತ
ಬಾ ಬಾಳಿಗೆ ಬಾ
ಚೆಲುವೆ ದಂತದಲ್ಲಿ ತಿದ್ದಿದಂತ ಚಿನ್ನದಲ್ಲಿ ಅಡ್ಡಿದಂತ
ಗೊಂಬೆ ನನ್ನ ರಂಭೆ ನಿನ್ನ ಸಂಘವನ್ನು ಬಯಸಿರುವೆ

ಪರದೆ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೊನೆ
ತುತಿಯ ಮೇಲೆ ತುತಿಯ ಒತ್ತಿ ಬಿಸಿಯ ಮುತ್ತು ಕೊಟ್ಟೊನೆ

ಮೆಚ್ಚಿ ಬಂದ ಚೆಲುವೆ ಪ್ರೇಮದಲಿ ಹುಚ್ಚನಡೆ ನಿನಗೆ
ಒಲವೇ ನಮ್ಮ ಒಡವೆ ಬದುಕಲಿ ನೀನೆ ನಲ್ಲ ನನಗೇ
ಪ್ರಣಯರಾಗ ನುಡಿದಿದೆ ಸರಿಗಮ
ಮನದ ತುಂಬ ಒಲವಿನ ಜುಮಾ ಜುಮಾ
ಬಾ ಬಾಳಿಗೆ ಬಾ
ಇರುಳು ಹೊತ್ತು ಜಾರಿ ಕತ್ತಲಗಿ ಕತ್ತಲಳ್ಳಿ ಬೆತ್ತಲಗಿ
ಮುತ್ತಿನಂಥ ಮತ್ತಿನಲ್ಲಿ ಮತ್ತೆ ಬಂದೆ ನಿನ್ನ ಬಾಳಿಗೆ
ಬೆನ್ನ ಹಿಂದೆ ಗುತ್ತಾಗಿ ಬಂದು ನನ್ನ ಕಣ್ಣ ಮುಚ್ಚೋಲೆ
ಮೈಗೆ ಮಯ್ಯಿ ಟಚ್-ಆದ ಮೇಲೆ ಮನದ ಆಸೆ ಬಿಚ್ಚೋಲೆ
ಮುಗಿಲ ಮಿಂಚಿನ ಚಿಂತಾಮಣಿ ನಗುವ ಚೆಲುವಿನ ಚೂಡಾಮಣಿ
ನಿನ್ನ ನೋಟ ಮೈಯ್ಯ ಮಾತ ಮನವ ಕೆಣಕಲು ಚಳಿ ಚಳಿ ಎದೆಯೊಳಗೆ

ಪರದೆ ಎತ್ತಿ ಪನ್ನೀರ ಚೆಲ್ಲಿ ಹಣೆಗೆ ಬೊಟ್ಟು ಇಟ್ಟೊನೆ
ತುತಿಯ ಮೇಲೆ ತುತಿಯ ಒತ್ತಿ ಬಿಸಿಯ ಮುತ್ತು ಕೊಟ್ಟೊನೆ