ಜನಕನ ಮಾತ - The Indic Lyrics Database

ಜನಕನ ಮಾತ

गीतकार - Vijaya Narasimha | गायक - S. P. Balasubrahmanyam | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ಜನಕನ ಮಾತ ಶಿರದಲಿ ಧರಿಸಿದ
ಜನಕನ ಮಾತ ಶಿರದಲಿ ಧರಿಸಿದ
ಅನುಪಮಾ ರಘುರಾಮ ಊ ತ್ಯಾಗವೇ ನಿಜ ಧರ್ಮ
ಮನೆಯಲಿ ಬಿರುಕು ಬದುಕಿಗೆ ಕೆಡಕು
ಎನ್ನುವ ಈ ನೀತಿ ತಿಳಿದರೆ ಸುಖ ಶಾಂತಿ
ಜನಕನ ಮಾತ ಶಿರದಲಿ ಧರಿಸಿದ
ಅನುಪಮಾ ರಘುರಾಮ ಊ ತ್ಯಾಗವೇ ನಿಜ ಧರ್ಮ

ಸಿರಿ ಸುಖ ಧೂಳು ಎನಿಸಿ ದೊರೆತನ ದೂರ ಇರಿಸಿ
ಚಪಲತೆ ಎಲ್ಲ ತ್ಯಾಜಿಸಿ ಅರಿವಿನ ದೀಪ ಉರಿಸಿ
ನಡೆದನು ರಾಮ ವೀರಾಗಿ ತಂದೆಯ ಆಣತಿಗಾಗಿ
ರಾಮನು ಪ್ರೇಮದ ಮೂರ್ತಿ ಸತಿ ಸೀತೆಯು ರಮಣ ಸ್ಪೂರ್ತಿ
ಭೂಮಿಯ ಗೆದ್ದರೆ ರಾಜ್ಯ ಮನದಾಸೆಯ ಗೆದ್ದವ ಪೂಜ್ಯ
ಬದುಕೆ ವಿಧಿ ಸೂತ್ರವು ಮಾನವ ನೆಪ ಮಾತ್ರವು

ಜನಕನ ಮಾತ ಶಿರದಲಿ ಧರಿಸಿದ
ಅನುಪಮಾ ರಘುರಾಮ ಊ ತ್ಯಾಗವೇ ನಿಜ ಧರ್ಮ

ತನು ಸುಖ ಒಂದೆ ಕೋರಿ ಇದು ಮಿತಿ ಮಣ್ಣಿಗೆ ತೋರಿ
ಮತ್ತಿ ಭ್ರಮೆ ಹೊಂದುತ ಜಾರಿ ಪಠಣದ ಅಂಚನು ಸೇರಿ
ಲಕ್ಷ್ಮಣ ರೇಖೆಯ ಮೀರಿ ನೀತಿಯು ನೀಗಿತು ದಾರಿ
ಯೋಗಯು ಪುಣ್ಯದ ರೂಪ ಅನುರಾಗವು ಬಾಳಿನ ದೀಪ
ಬಯಸುತ ಅಣ್ಣನ ಪ್ರೇಮ ಬಲಿ ಬಂದನು ಪ್ರೀತಿಯ ತಮ್ಮಾ
ಬದುಕೆ ವಿಧಿ ಸೂತ್ರವು ಊ ಮಾನವ ನೆಪ ಮಾತ್ರವು

ಜನಕನ ಮಾತ ಶಿರದಲಿ ಧರಿಸಿದ
ಅನುಪಮಾ ರಘುರಾಮ ಊ ತ್ಯಾಗವೇ ನಿಜ ಧರ್ಮ
ತ್ಯಾಗವೇ ನಿಜ ಧರ್ಮ ತ್ಯಾಗವೇ ನಿಜ ಧರ್ಮ