ನಾನೂ ನಾನು ನೀನು - The Indic Lyrics Database

ನಾನೂ ನಾನು ನೀನು

गीतकार - Hamsalekha | गायक - Rajkumar, S. P. Balasubrahmanyam, Manjula Gururaj, Sangeetha Katti | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ನಾನೂ
ನಾನು ನೀನು ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನು
ನಾನೂ
ನಾನು ನೀನು ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನು

ಒಲ್ಲೆ ಕವನ ಜನಿಸೋದು ಭಾಷೆ ಭಾವ ಸೇರಿ
ಒಳ್ಳೆ ಹಾಡು ಅರಳೋದು ರಾಗ ತಾಳ ಸೇರಿ
ಸ್ನೇಹ ಎಂದು ಜನಿಸೋದು ಮನಸು ಮನ್ಸು ಸೇರಿ
ಹೊಸ ಬಾಳು ಎಂದು ಅರಳೋದು ಪ್ರೀತಿ ಪ್ರೇಮ ಸೇರಿ
ಇಲ್ಲಿ ಮೇಲಿಲ್ಲ ಕೀಳಿಲ್ಲ ನಾವು ಬೇವು ಇಲ್ಲ
ನೀನು ನಾನೇ ನೀನು ನಾನೇ
ನೀನು ನಾನೇ ನಾನೂ ನೀನು
ಇನ್ನು ಬಾಳೆಲ್ಲ ಸುಖ ತಾನೆ

ನಾನು ನಾನು ನೀನು ಹಾಲು ಜೇನು ಭೂಮಿ ಬಾನು
ನಾನು ನಾನು ನೀನು ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನು

ಎರಡು ಕಣ್ಣು ನೋಡೋದು ಒಂದೇ ನೋಟ ತಾನೆ
ಈ ಎರಡು ಪದ ತುಳಿಯೋದು ಒಂದೆ ದಾರಿ ತಾನೆ
ಜೋಡಿ ಹಸ್ತ ಬೇಡೋದು ಒಂದೇ ದೇವರ ತಾನೆ
ಈ ಜೋಡಿ ಹೃದಯ ಮಿಡಿಸೋದು ಒಂದೇ ಬಯಕೆ ತಾನೆ
ನಿಮ್ಮ ಮುದ್ದಾದ ಜೋಡಿನ ಬ್ರಹ್ಮ ಕೂಡಿ ಹಾಕಿ
ಹಾದಿ ಎಂದ ಬಾಳಿ ಎಂದ
ಬಾಳಿ ಎಂದ ಹಾದಿ
ಇನ್ನು ಬಾಳೆಲ್ಲ ಅಂದ ಚಂದ

ನಾನು ನಾನು ನೀನು ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನು
ನಾನು ನಾನು ನೀನು ಹಾಲು ಜೇನು ಭೂಮಿ ಬಾನು
ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನು