ಸೋಲೆ ಗೆಲುವೆಂದು ಬಾಳಲಿ - The Indic Lyrics Database

ಸೋಲೆ ಗೆಲುವೆಂದು ಬಾಳಲಿ

गीतकार - Geethapriya | गायक - Rajkumar | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳು ನಗುವು ಎಲ್ಲಾ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳು ನಗುವು ಎಲ್ಲಾ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ದೇಹವ ಸವೆಸುತ ಪರಿಮಳ ಕೊಡುವ
ಗಂಧವು ನೋವಿಗೆ ನರಳುವುದು
ತನ್ನನೆ ದಹಿಸುತ ಬೆಳಕನು ತರುವಾ
ದೀಪವು ಅಲಲನು ಹೇಳುವುದು
ನಿನ್ನಯ ಸಹನೆಗೆ ಹೊಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು
ಈ ಜನ್ಮ ಸಾರ್ಥಕವು

ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ

ಗಾಳಿಯ ಭೀಕರ ದಾಳಿಗೆ ಪರ್ವತ
ಷ್ಟೈರ್ಯವನೆಂದಿಗು ಕಳೆಯುವುದೆ
ಸುಖ ಸಂಸಾರಕೆ ದುಡಿಯುವ ಹೆಣ್ಣು
ಸ್ವಾರ್ಥಕೆ ಮನಸನು ನೀಡುವಳೆ
ನಿಂದಾನೆ ಮಾತಿಗೆ ಕುಂದದೆ ಇರುವಾ
ಮಮತೆಯ ಮೂರ್ತಿಯೇ ನೀನಾಗಿರಲು
ಜೀವನ ಪಾವನವು

ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳು ನಗುವು ಎಲ್ಲಾ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ