ಹದಿನಾಲ್ಕು ವರ್ಷ ವನವಾಸದಿಂದ - The Indic Lyrics Database

ಹದಿನಾಲ್ಕು ವರ್ಷ ವನವಾಸದಿಂದ

गीतकार - Vijaya Narasimha | गायक - P. Susheela | संगीत - Vijaya Bhaskar | फ़िल्म - Sharapanjara | वर्ष - 1971

Song link

View in Roman

ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀ ರಾಮಚಂದ್ರನ ಪ್ರೇಮದ ಆಸರೆ ಒಂದೇ ಸಾಕೆಂದಳು ಆ ಮಾತೆ

ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ
ಮರಳಿ ಬಂದಳು ಸೀತೆ

ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾದಳು ಸೀತೆ
ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾದಳು ಸೀತೆ
ಅಗ್ನಿಯೇ ದಹಿಸದೆ ಘೋಷಿಸಿದ ಸೀತೆ ಪುನೀತೆ
ಸೀತೆ ಪುನೀತೆ
ಅಲ್ಪಾಗಾಸನ ಕಲ್ಪನೆ ಮಾತಿಗೆ ಅಳುಕಿದ ಶ್ರೀರಾಮ
ಅಲ್ಪಾಗಾಸನ ಕಲ್ಪನೆ ಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಶಿತೆ ಸೀತೆ ಧೂಷಿತೆ ಎಂದನೇ ರಾಜಾರಾಮ
ಮತ್ತೇ ಸೀತೆಯ ಕಾಡಿಗಟ್ಟಿದ ನ್ಯಾಯವಾದಿ ರಾಮ ॥

ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ
ಮರಳಿ ಬಂದಳು ಸೀತೆ

ಪೂರ್ಣ ಗರ್ಭಿಣಿ ಪುಣ್ಯ ರೂಪಿಣಿಯ ಕಂಡನು ವಾಲ್ಮೀಕಿ
ಪೂರ್ಣ ಗರ್ಭಿಣಿ ಪುಣ್ಯ ರೂಪಿಣಿಯ ಕಂಡನು ವಾಲ್ಮೀಕಿ
ಲೋಕ ಮಾತೆಗೇ ಶೋಕ ಸಾಗರವೇ ನಿರ್ಧಯೀ ರಾಮ ॥
ನಿರ್ಧಯೀ ರಾಮ
ಪರ್ಣಕುಟೀರದೆ ಲವ ಕುಶ ಜನನ ಸೀತೆಗೆ ಶಾಂತಿ ನಿಕೇತನ
ಪರ್ಣಕುಟೀರದೆ ಲವ ಕುಶ ಜನನ ಸೀತೆಗೆ ಶಾಂತಿ ನಿಕೇತನ
ಪರಮ ಪಾವನೇ ಪ್ರಾಣ ವಲ್ಲಭೆ ಎನ್ನುತ ರಮಣ ಆಗಮನ
ಸಂಗಮ ಸಮಯದಲ್ಲಿ ಭೂಕಂಪನ
ಚಿರವಿರಹವೇ ಜಾನಕಿ ಜೀವನ

ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀ ರಾಮಚಂದ್ರನ ಪ್ರೇಮದ ಆಸರೆ ಒಂದೇ ಸಾಕೆಂದಳು ಆ ಮಾತೆ

ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ
ಮರಳಿ ಬಂದಳು ಸೀತೆ