ಓ ಮಲ್ಲಿಗೆಯೇ - The Indic Lyrics Database

ಓ ಮಲ್ಲಿಗೆಯೇ

गीतकार - Hamsalekha | गायक - Karpoorada Gombe | संगीत - Hamsalekha | फ़िल्म - Karpoorada Gombe | वर्ष - 1996

Song link

View in Roman

ಓ ಮಲ್ಲಿಗೆಯೇ ಹರಸಿ ಹಾಡುವೆ ನಿನಗೆ ನಾನು
ಓ ಸಂಪಿಗೆಯೇ ವರವ ಬೇಡುವೆ ನಿನಗೆ ನಾನು
ಮಧುರವಾಗಲಿ ಎಲ್ಲ ಸುಖದಿ ತೇಲಲಿ ಎಲ್ಲ
ಇದೇ ಹಾಡುವೆ ಸದಾ ನಾ ಇದೆ ಬೇಡುವೆ ಸದಾ
ಊ ಮಲ್ಲಿಗೆಯೇ ಹರಸಿ ಹಾಡುವೆ ನಿನಗೆ ನಾನು
ಊ ಸಂಪಿಗೆಯೇ ವರವ ಬೇಡುವೆ ನಿನಗೆ ನಾನು

ನಿನ್ನ ಮದುವೆ ಮಂಟಪ ನಾನೇ ಮಾಡಿರುವೆ
ಒಳ್ಳೆ ವರ ತರುವೆ ಧಾರೆ ನಾನೆರೆವೆ
ಮಲ್ಲೆ ಮದುವೆಗೆ ಮುಂಚೆಯೇ ಹಸೆ ಎರಡು ಸಂಪಿಗೆ
ಪ್ರೀತಿ ಮಾತಿನ ತಂಪಿಗೆ ಸೋಲಲೇಬೇಕು ಸಂಪಿಗೆ
ಕಾಲ ನೋಡಲಿ ಎಲ್ಲ ಚೈತ್ರವಾಗಲಿ ಎಲ್ಲ
ಇದೇ ಹಾಡುವೆ ಸದಾ ನಾ ಇದೆ ಬೇಡುವೆ ಸದಾ

ಊ ಮಲ್ಲಿಗೆಯೇ ಹರಸಿ ಹಾಡುವೆ ನಿನಗೆ ನಾನು
ಊ ಸಂಪಿಗೆಯೇ ವರವ ಬೇಡುವೆ ನಿನಗೆ ನಾನು

ಸಸಾಸ ಸಸ್ಸ ನಿಸ ದನಿಪ ಮಾಪ ಮಗ ಮಾ ಪದನಿಪ ದನಿಸಾರಿ
ಸಸಾಸ ಸಸ್ಸ ನಿಸ ದನಿಪ ಮಾಪ ಮಗ ಮಾ ಪದನಿಪ ದನಿಸಾರಿ
ರಿಗಮ ಪಗರಿಗ ರಿಸ ಸನಿ ದಪಾನಿ ಸಾ
ರಿಗಮ ಪಗರಿಗ ರಿಸ ಸನಿ ದಪಾನಿ ಸಾ

ನಿನ್ನ ಕರುಳಿನ ಬಲ್ಲಿಗೆ ನಾನೇ ಮರವಮ್ಮ
ನಾನೇ ಗುರುವಮ್ಮ ನಾನೇ ದೊಡ್ಡಮ್ಮ
ಇದೋ ನಿನ್ನಯ ಮಗುವಿದು ನಿನ್ನ ಬಿಟ್ಟು ಹೋಗದು
ನಿನ್ನ ಹೊಳುವ ಗೊಂಬೆಯ ನೋಡೋ ಕನಸಿದೆ ನನ್ನದು
ಕಾಲ ನೋಡಲಿ ಎಲ್ಲ ಚೈತ್ರವಾಗಲಿ ಎಲ್ಲ
ಇದೇ ಹಾಡುವೆ ಸದಾ ನಾ ಇದೆ ಬೇಡುವೆ ಸದಾ

ಊ ಸಂಪಿಗೆಯೇ ವರವ ಬೇಡುವೆ ನಿನಗೆ ನಾನು
ಊ ಮಲ್ಲಿಗೆಯೇ ಹರಸಿ ಹಾಡುವೆ ನಿನಗೆ ನಾನು