ಚೆಲುವೆಯ ಅಂದದ ಮೊಗಕೆ - The Indic Lyrics Database

ಚೆಲುವೆಯ ಅಂದದ ಮೊಗಕೆ

गीतकार - Chi. Udaya Shankar | गायक - S. P. Balasubramanyam | संगीत - Rajan-Nagendra | फ़िल्म - Devara Gudi | वर्ष - 1975

Song link

View in Roman

ಚೆಲುವೆಯ ಅಂದದ ಮೊಗಕೆ ಕಣ್ಣೆ ಭೂಷಣ..
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಚೆಲುವೆಯ ಅಂದದ ಮೊಗಕೆ ಕನ್ನೆ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತ್ಯೇ ಕಾರಣ

ಬಾನಿಗೆ ಎಂದೆಂದಿಗು ಆ ರವಿಯೆ ಭೂಷಣ
ಬಳುಕುವ ಲತೆಗೆ ಹೆಣ್ಣಿನ ಮುಡಿಗೆ ಹೂವೆ ಭೂಷಣ

ರಾಜನಿಗೆ ಎಂದೆಂದಿಗು ಆ ಶಶಿಯೇ ಭೂಷಣ
ಅರಳಿದ ಮನಕೆ ಹವಳದ ತುಟಿಗೆ ನಗುವೆ ಭೂಷಣ
ನೋವಿಗೆ.. ನಲಿವಿಗೆ..
ನೋವಿಗೆ ನಲಿವಿಗೆ ಹೆಣೀ ಕಾರಣ..

ಚೆಲುವೆಯ ಅಂದದ ಮೊಗಕೆ ಕನ್ನೆ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತ್ಯೇ ಕಾರಣ

ಮದುವೆಯ ಅನುಭವವು ಎಂದು ಅಳಿಯದು
ಕೋಪದ ಕಿಡಿಗೇ ರೋಷದ ಊರಿಗೆ ಒಲವು ಬಾಡದು
ದೇಹವು ದೂರಾದರು ಮನಸು ಮರೆಯಾದರು
ಬೆರಿತಿಹ ಜೀವ ವಿರಹದ ನೋವ ಎಂದು ಸಹಿಸದು
ಒಲವಿನ.. ಜೀವನ..
ಒಲವಿನ ಜೀವನ ಸುಕಕೇ ಸದನ

ಚೆಲುವೆಯ ಅಂದದ ಮೊಗಕೆ ಕನ್ನೆ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೆ ಭೂಷಣ
ಸುಖ ಸಂಸಾರಕೆ ಎಂದು ಸತ್ಯೇ ಕಾರಣ