ಓಡುವ ನದಿ ಸಾಗರವ - The Indic Lyrics Database

ಓಡುವ ನದಿ ಸಾಗರವ

गीतकार - Chi. Udaya Shankar | गायक - P. B. Sreenivas, P. Susheela | संगीत - Rajan-Nagendra | फ़िल्म - Bangarada Hoovu | वर्ष - 1967

Song link

View in Roman

ಓಡುವ ನದಿ ಸಾಗರವ ಬೇರೆಯಲೇ ಬೇಕು
ನಾನೂ ನೀನು ಎಂದಾದರೂ ಸೇರಲೇ ಬೇಕು
ಸೇರಿ ಬಾಳಲೇ ಬೇಕು ಬಾಳು ಬೆಳಗಲೇ ಬೇಕು

ಹೃದಯ ಹಗೂರಾಯ್ತು ಬದುಕು ಜೇನಾಯ್ತು
ನಿನ್ನ ವಚನ ಹೊಸ ಬಾಳಿಗೆ ನಾಂದಿಯಾಯಿತು

ಓಡುವ ನದಿ ಸಾಗರವ ಬೇರೆಯಲೇ ಬೇಕು
ನಾನೂ ನೀನು ಎಂದಾದರೂ ಸೇರಲೇ ಬೇಕು
ಸೇರಿ ಬಾಳಲೇ ಬೇಕು ಬಾಳು ಬೆಳಗಲೇ ಬೇಕು

ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರ ಬೇಕು
ಮನೆಯ ಸುತ್ತ ಹೂವಿನ ರಾಶಿ ಹಾಸಿರಬೇಕು
ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರ ಬೇಕು
ಮನೆಯ ಸುತ್ತ ಹೂವಿನ ರಾಶಿ ಹಾಸಿರಬೇಕು

ತಂಗಾಳಿ ಜೋಗುಳವ ಹಾಡಲೇ ಬೇಕು
ತಂಗಾಳಿ ಜೋಗುಳವ ಹಾಡಲೇ ಬೇಕು
ಬಂಗಾರದ ಹೂವೇ ನೀನು ನಗುತಿರಬೇಕು
ನನ್ನ ಜೊತೆಗಿರಬೇಕು

ಓಡುವ ನದಿ ಸಾಗರವ ಬೇರೆಯಲೇ ಬೇಕು
ನಾನೂ ನೀನು ಎಂದಾದರೂ ಸೇರಲೇ ಬೇಕು
ಸೇರಿ ಬಾಳಲೇ ಬೇಕು ಬಾಳು ಬೆಳಗಲೇ ಬೇಕು

ಆಹಾಹಾ ಓಓಓಓಓ ಅಹಹಾಹಾ..

ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಃಖದಲ್ಲಿ ಭಾಗಿ ಆಗುವೆ
ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ
ಹರುಷದಲ್ಲಿ ದುಃಖದಲ್ಲಿ ಭಾಗಿ ಆಗುವೆ

ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ
ಬಲ್ಲಿ ಮರವ ಹಬ್ಬದಂತೆ ನಿನ್ನೊಡನಿರುವೆ
ಬಯಕೆ ಪೂರೈಸುವೆ

ಓಡುವ ನದಿ ಸಾಗರವ ಬೇರೆಯಲೇ ಬೇಕು
ನಾನೂ ನೀನು ಎಂದಾದರೂ ಸೇರಲೇ ಬೇಕು
ಸೇರಿ ಬಾಳಲೇ ಬೇಕು ಬಾಳು ಬೆಳಗಲೇ ಬೇಕು

ಹೃದಯ ಹಗೂರಾಯ್ತು ಬದುಕು ಜೇನಾಯ್ತು
ನಿನ್ನ ವಚನ ಹೊಸ ಬಾಳಿಗೆ ನಾಂದಿಯಾಯಿತು

ಲಾ ಲಾ ಲಾ ಲಾ ಅಹ್ಹಾ ಲಲಾಲಾ ಓಹೋಹೋಹೋ ಲಾಲಾಲಾ ಹ್ಮ್ಹ್ಮ್ಮ್