ಹಸಿ ಬಿಸಿ - The Indic Lyrics Database

ಹಸಿ ಬಿಸಿ

गीतकार - Jayanth Kaikini | गायक - Shweta Mohan | संगीत - Arjun Janya | फ़िल्म - College Kumar | वर्ष - 2017

Song link

View in Roman

ಹಸಿ ಬಿಸಿ ಹೃದಯವು ಹೊರಟಿದೆ ನಿನ್ನ ಹಿಂಬಾಲಿಸಿ
ಜೊತೆಯಲಿ ಜಗವನೆ ಮರೆಯಲು ನನಗು ತುಂಬ ಖುಷಿ
ಕರೆಯ ನೀಡಲೆ ಬಯಸಿ
ನೀನೆಂದರೆ ನನಗೀಗಳೇ ಎಂಥಾ ಕೌತುಕ
ಖಳನಾಯಕ ನೀನೇಕೆ ಆಕರ್ಷಕ

ಹಸಿ ಬಿಸಿ ಹೃದಯವು ಹೊರಟಿದೆ ನಿನ್ನ ಹಿಂಬಾಲಿಸಿ
ಜೊತೆಯಲಿ ಜಗವನೆ ಮರೆಯಲು ನನಗು ತುಂಬ ಖುಷಿ

ಸಂತೆಲಿ ಒಂಚೂರು ಕೈ ಸೋಕುವಾಗ
ಜೀವಕೆ ಲಕ್ಷ ದೀಪೋತ್ಸವ
ಈ ಕಣ್ಣಾ ತೇರೆಯಲ್ಲಿ ಮಿಂಚುತ್ತಿರೋ
ಸಮಾಚಾರ ನೀನಿನ್ನು ಓದಿಲ್ಲವಾ
ಕನಸೊಂದನು ಹೆಣೆಯುತ್ತಿದೆ ನನ್ನ ಕಲ್ಪನೆ
ನೆರವೆರಿಸು ನೀ ಬಂದು ಉದ್ಘಾಟನೆ

ಹಸಿ ಬಿಸಿ ಹೃದಯವು ಹೊರಟಿದೆ ನಿನ್ನ ಹಿಂಬಾಲಿಸಿ ಹಿಂಬಾಲಿಸಿ
ಜೊತೆಯಲಿ ಜಗವನೆ ಮರೆಯಲು ನನಗು ತುಂಬ ಖುಷಿ

ಇನ್ಯಾರಲೋ ಕೂಡ ನಾ ಕಾಣದಂತ
ದಿವ್ಯ ಕಿಡಿಯೊಂದು ನಿನ್ನಲ್ಲಿದೆ
ಎಲ್ಲಿದ್ದರು ಜೀವ ನಿನ್ನೊಂದಿಗೇ
ಇದಿ ರಾತ್ರಿ ಮಳೆಯಂತೆ ಮಾತಾಡಿದೆ
ಮರೆಮಾಚುವ ಗಡಿ ದಾಟಿದೆ ನನ್ನ ಅಕ್ಕರೆ
ಪ್ರತಿಸ್ಪಂದಿಸು ನೀ ಬೇಗ ಗೊತ್ತಾದರೇ

ಹಸಿ ಬಿಸಿ ಹೃದಯವು ಹೊರಟಿದೆ ನಿನ್ನ ಹಿಂಬಾಲಿಸಿ
ಜೊತೆಯಲಿ ಜಗವನೆ ಮರೆಯಲು ನನಗು ತುಂಬ ಖುಷಿ