ಕಣ್ಣಿಗೆ ಕಾಣದ ನಾಟಕಕಾರ - The Indic Lyrics Database

ಕಣ್ಣಿಗೆ ಕಾಣದ ನಾಟಕಕಾರ

गीतकार - R. N. Jayagopal | गायक - S. P. Balasubrahmanyam | संगीत - M. Ranga Rao | फ़िल्म - Olavina Udugore | वर्ष - 1987

Song link

View in Roman

ಕಣ್ಣಿಗೆ ಕಾಣದ ನಾಟಕಕಾರ
ನಿನಗೆ ನನ್ನ ನಮಸ್ಕಾರ
ಪಾತ್ರಗಳಲ್ಲಿ ತಿರುವುಗಳೆನಿತೋ
ಪಾತ್ರಗಳಲ್ಲಿ ತಿರುವುಗಳೆನಿತೋ
ಬಲ್ಲವೇ ನೀನೆ ಸೂತ್ರಧಾರಾ.. ಆ..

ಕಣ್ಣಿಗೆ ಕಾಣದ ನಾಟಕಕಾರ
ನಿನಗೆ ನನ್ನ ನಮಸ್ಕಾರ

ಶಿಶುವೇ ಜೋಗುಳ ಹಾಡುವುದು
ಇರುಳಲಿ ಸೂರ್ಯನು ತೋರುವನು
ಮಹಿಮನೆ ನೀ ನೆನೆದಾಗ

ಬಡವ ಬಲ್ಲಿದ ಆಗುವನು
ಕುರುಡನು ಎಲ್ಲವ ನೋಡುವನು
ಅವನಲಿ ನೀ ಒಲಿದಾಗ

ನೆನೆದು ಎಲ್ಲ ನಡೆದೆ ಹೋದರೆ
ದೇವನೆ ನಿನಗೆ ಬೆಲೆಯೆಲ್ಲಿ..
ನಡೆಯುವುದೆಲ್ಲ ಮುಂಚೆಯೇ ತಿಳಿದರೆ
ಮಾನವ ಗರ್ವಕೆ ಮಿತಿಯೆಲ್ಲಿ

ಮನುಷ್ಯನು ದೇವರು ವಿಲೇವಾರಿ ಮಾಡುವುದನ್ನು ಪ್ರಸ್ತಾಪಿಸುತ್ತಾನೆ

ಕಣ್ಣಿಗೆ ಕಾಣದ ನಾಟಕಕಾರ
ನಿನಗೆ ನನ್ನ ನಮಸ್ಕಾರ

ಪ್ರೇಮಿಗಳನ್ನು ಬೆರ್ಪಡಿಸಿ
ನೂತನ ಜೋಡಿಯ ಸೇರಿಸುವೆ
ಗೊಂಬೆಯ ರೀತಿ ಆಡಿಸುವೆ

ಮಾವಿಗೆ ಬೇವಿನ ರುಚಿ ಬೆರೆಸಿ
ನಾಲಿಗೆ ಅದನು ಅನುಭವಿಸಿ
ಹೀರುವ ಹಾಗೆ ಮಾಡಿಸುವೆ

ಮಾನವನಾಗಿ ಹುಟ್ಟಿ ನೀ ಬಂದರೆ
ಕಷ್ಟದ ಅರ್ಥ ನೀ ತಿಳಿವೆ..
ಪ್ರೇಮಿಸಿ ನೀನು ವಿರಹದಿ ಬೇಂದ್ರೆ
ನಮ್ಮಯ ನೋವನು ನೀ ಅರಿವೇ

ಪ್ರೀತಿಯೇ ದೇವರು ಎಂದು ಅವರು ಹೇಳುತ್ತಾರೆ
ಆದರೆ ನಾನು ಹೇಳುತ್ತೇನೆ
ದೇವರಿಗೆ ಪ್ರೀತಿಯ ಬಗ್ಗೆ ಏನೂ ತಿಳಿದಿಲ್ಲ

ಕಣ್ಣಿಗೆ ಕಾಣದ ನಾಟಕಕಾರ
ನಿನಗೆ ನನ್ನ ನಮಸ್ಕಾರ