ಪ್ರೇಮದ ಹೂಗಾರ - The Indic Lyrics Database

ಪ್ರೇಮದ ಹೂಗಾರ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Chikkejamanru | वर्ष - 1992

Song link

View in Roman

ಪ್ರೇಮದ ಹೂಗಾರ
ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನಿಡುತಾನೆ ಮುಳ್ಳು ಬೇಡುತಾನೆ
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನಿಡುತನೇ ಕಹಿ ಕೇಳುತನೇ
ಮಣ್ಣಿನ ಮಮಕಾರ ತಂಪಿರುವ
ಮನದ ಮಣಿಹಾರ ಹೊಂಡಿರುವ
ಈ ಭಾವ ಜೀವ

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ಗಂಧದ ಕೊರಲಗಿ ಸ್ವಂತಕೆ ಬರಡಗಿ
ನೋವಿನಲು ತೇಯುವುದು ಈ ಒಡಲು
ಗಂಗೆಯು ಹಣಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು
ಕರುಣೇಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತಾನೆ ಕೊಡ ನೀಡುತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತಾನೆ ಹೊರ ಹೋಗುತಾನೆ
ಗೋವಿನ ಹಾಲಂತ ಮನಸಿರುವ
ಕೂಸಿನ ಜೆನಂತ ಮತ್ತಿರುವ
ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ

ನಿತ್ಯವೂ ತನುರಿದು ಲೋಕಕೆ ದಿನಗರೆದು
ಎಚ್ಚರೋ ಸೂರ್ಯನಿಗೆ ನಿದ್ರೆಯಿಲ್ಲ
ರಾತ್ರಿಗೆ ತನುಲಿದು ತಾಪಕೆ ತಂಪೆರೆದು
ಸಂಚಾರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆನೆಕಾರ
ಊರಿನ ಗೆನೆಕಾರ ಈ ಹಾಡುಗಾರ
ಕಾಪಾಡುತಾನೆ ಕಡೆಯಾಗುತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಾಡುತಾನೆ ಒಂಟಿಯಾಗುತಾನೆ
ಮಣ್ಣಿನ ಮಮಕಾರ ಕಂಪಿರುವ
ಮನದ ಮಣಿ ಹಾರ ಹೊಂದಿರುವ

ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ