ಮನಸೇ - The Indic Lyrics Database

ಮನಸೇ

गीतकार - Arjun | गायक - M.M. Keeravani, Harini | संगीत - Jassie Gift | फ़िल्म - Prema Baraha | वर्ष - 2017

Song link

View in Roman

ಮನಸೇ ಮನಸೇ
ನೀ ಏಕೆ ಹೀಗೇ ನಗುವೆ
ನಗುವೇ ನಗುವೆ
ನೀ ಏಕೆ ಹೀಗೇ ಅಳುವೆ
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ

ಮನಸೇ ಮನಸೇ
ನೀ ಏಕೆ ಹೀಗೇ ನಗುವೆ
ನಗುವೇ ನಗುವೆ
ನೀ ಏಕೆ ಹೀಗೇ ಅಳುವೆ

ನಾನೆಲ್ಲೋ ಬಂದೆ
ನೀನು ಇನ್ನೆಲ್ಲಿಗೆ ಸೆಳೆದೆ
ಮನಸೇ ಮನಸೇ
ಬೇಡ ಅಂದರೂನು
ಇಂಥಾ ಹಟ ಸರಿಯೇ
ಮನಸೇ ಮನಸೇ

ದೂರದ ಚಂದಿರ
ಕಂಡನು ಹತ್ತೀರ
ನಿನ್ನ ಈ ಕೈಯಿಗೆ
ಎಂದೆಂದಿಗು ಸಿಗಲಾರ್ದೌ ಮರುಳೆ

ಮನಸೇ ಮನಸೇ
ನೀ ಏಕೆ ಹೀಗೇ ನಗುವೆ
ನಗುವೇ ನಗುವೆ
ನೀ ಏಕೆ ಹೀಗೇ ಅಳುವೆ

ಕಣ್ಣಲ್ಲಿ ಎದೆಯಲ್ಲಿ
ಈ ಹಂಬಲ ಸರಿಯೇ
ಮನಸೇ ಮನಸೇ
ಈ ಪ್ರೀತಿ ಈ ಭಾವ ಈ ಆಸೆಯು ಕನಸೇ
ಮನಸೇ ಮನಸೇ

ಪ್ರೇಮದ ಸಾಗರ
ಗಾಳಿಯ ಗೋಪುರ
ನನ್ನ ಎದೆಯಾಳದ
ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟೆ

ಮನಸೇ ಮನಸೇ
ನೀ ಏಕೆ ಹೀಗೇ ನಗುವೆ
ನಗುವೇ ನಗುವೆ
ನೀ ಏಕೆ ಹೀಗೇ ಅಳುವೆ
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ