ಅಡವಿ ದೇವಿಯ - The Indic Lyrics Database

ಅಡವಿ ದೇವಿಯ

गीतकार - M. N. Vyasa Rao | गायक - S. P. Balasubrahmanyam, K. S. Chithra | संगीत - Raj-Koti | फ़िल्म - Rayaru Bandaru Mavana Manege | वर्ष - 1993

Song link

View in Roman

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ
ಕನ್ನಡ ನಾಡೆ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಕಾಡು ಮಲ್ಲಯ್ಯಂಗೆ ಜೇನುಕಿಟ್ಟು ಪೂಜೆ ಕೊಟ್ಟು
ಜಾಜಿ ಮಲ್ಲೇ ತಂದು ದೇವಮ್ಮಂಗೆ ಮಳೆಯಿತ್ತು
ಏಳು ಹದ್ದಿ ಇಂದಾ ಏಳು ರಾತ್ರಿ ಏಳು ಹಗಲು
ಎಲು ಕನ್ಯೆರಿಂಗ್ ಸೋಬಲಕ್ಕಿ ದೇವಿಗಿದಾಳು
ಚಿಗುರೊಡೆಯಿತು ಬೆಳಕರಳಿತು ಹೊಳೆ ಹರಿಸಿತು ರಸತನ
ಮನೆಮನೆಯಲು ಜನಮನದಳು ಶಿವನೊಳವಿನ ಶುಭ ಧ್ಯಾನ
ಕನ್ನಡ ನೆಲವೇ ಧಾನ್ಯ ಕನ್ನಡ ಜಲವೇ ಮಾನ್ಯ
ಕನ್ನಡ ನೆಲವೇ ಧಾನ್ಯ ಕನ್ನಡ ಜಲವೇ ಮಾನ್ಯ
ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿ

ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ

ಯಾರೆ ಇಲ್ಲಿ ಬಂದ್ರು ಸ್ನೇಹಕ್ಕೆ ಕಮ್ಮಿ ಇಲ್ಲ
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲಾ
ನಮ್ಮ ಧರ್ಮದಲ್ಲಿ ಬೇಧ ಭಾವ ಕಾಣೋದಿಲ್ಲ
ನಮ್ಮ ನೀತಿಯಲ್ಲಿ ಕಡೆ ಇಲ್ಲೆ ನಾಡೆ ಇಲ್ಲ
ಗಿಡಮರಗಳೆ ತರುಳತೆಗಳೇ ನಡಿವನಗಳೆ ವರದನಾ
ಜನ ಬೆರೆತರೆ ಸಮರದಲಿ ಅದೇ ಒಲವಿನ ಹೊಸಗಾನ
ಕನ್ನಡ ಜನರೆ ಚಂದ ಕನ್ನಡ ಮನವೇ ಅಂದ
ಕನ್ನಡ ಜನರೆ ಚಂದ ಕನ್ನಡ ಮನವೇ ಅಂದ

ಉಸಿರು ನೀಡಿದೆ ಹಸಿರು ತೂಗಿದೆ ಮಧುರವಾಗಿ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ