ಬುಗುರಿ ಬುಗುರಿ - The Indic Lyrics Database

ಬುಗುರಿ ಬುಗುರಿ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Chikkejamanru | वर्ष - 1992

Song link

View in Roman

ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ ಬುಗುರಿ ಬುಗುರಿ ಬುಗುರಿ ತಾಳೆ ತಿರುಗುವ ಜಂಬದ ಬುಗುರಿ
ಕೆಂಪನೆ ಕೆನ್ನೆಯ ಚಿನ್ನ ನಿನ್ನ ಬುಗುರಿಗೆ ಬಿಟ್ಟ ಗುನ್ನ
ಗುನ್ನದ ಮೇಲೆ ಗುನ್ನ ನಿನ್ನ ಬುಗುರಿಯ ತಲೆಗಿದೆ ರನ್ನ
ಆರ್ ಪಾರ ಕಲ್ಲರಿ ಆರ್ ಪಾರ ಕಲ್ಲರಿ
ಸೋತ ಮೇಲೇ ತಂಬೂರಿ ಸೋತ ಮೇಲೇ ತಂಬೂರಿ
ಆರ್ ಪಾರ ಕಲ್ಲರಿ ಆರ್ ಪಾರ ಕಲ್ಲರಿ
ಕೋಲಿ ಮೇಲೆ ಅಂಬಾರಿ ಕೋಲಿ ಮೇಲೆ ಅಂಬಾರಿ
ನಮ್ಮನೆ ಕೋಳಿ ಕಡ ಕಾಲ ಮುರಿದೊಯ್ತು
ನಮ್ಮನೆ ಕೋಳಿ ಕಡ ಕೈ ಮುರಿದೊಯ್ತು
ಹೇ ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ ಬುಗುರಿ ಬುಗುರಿ ಬುಗುರಿ ತಾಳೆ ತಿರುಗುವ ಜಂಬದ ಬುಗುರಿ

ಬಾಲೆಯ ಹಿಂದೆ ಬಾಳವ ಕಾಣೆ ಮಂಗನ ಬುದ್ದಿಯ ಬಾಯಾಡಿ
ಮಂಗನ ಬುದ್ದಿಯ ಬಾಯಾಡಿ
ಸುಂಟರಗಾಳಿ ಎಬ್ಬಿಸುತಿಯ ಊರಿನ ತುಂಬ ಓಡದಿ
ಊರಿನ ತುಂಬ ಓಡದಿ
ಸೀರೆಯ ಒಳಗಿರೋ ಭೂತ ನಿನಗ್ ಹಿಡಿದಿದೆ ತಾಂತೆಯ ಪ್ರೇತ
ಕುಳಿತರೆ ನಿನಗಿದೆ ಲಾತ ಮೇಲೆದ್ದರೆ ಹೊಡೆಸುವೆ ಗೊತ್ತಾ
ಆರ ಪಾರ ಕಲ್ಲರಿ ಆರ ಪರ್ ಕಲ್ಲರಿ ಮಲಗಿಕ ಬಂಗಾರಿ ಮಲಗಿಕ ಬಂಗಾರಿ
ಆರ ಪಾರ ಕಲ್ಲರಿ ಆರ ಪಾರ ಕಲ್ಲರಿ ಹೊಟ್ಟೆ ಮೇಲೆ ಬುಗುರಿ ಹೊಟ್ಟೆ ಮೇಲೆ ಬುಗುರಿ
ನಮ್ಮಹಳ್ಳಿ ಮಾನ ತೆಗೆದ ಬಾಯ್ ಬಿದ್ದೊಯ್ತು
ನಮ್ಮಹಳ್ಳಿ ಜನ ಕೆಡ್ಸೋ ಕಣ್ಣ ಮುಚ್ಚೋಯ್ತು
ಹೇ ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ ಬುಗುರಿ ಬುಗುರಿ ಬುಗುರಿ ತಾಳೆ ತಿರುಗುವ ಜಂಬದ ಬುಗುರಿ

ಹೆಂಗಸು ಪಾಪ ಅಂದರೆ ಶಾಪ ಹಾಕಿದೆ ನೀನು ಅವತ್ತು
ಹಳ್ಳಕೆ ಬಿದ್ದೆ ಈವತ್ತು
ಗಂಡಸು ನಾನು ಅಂದರೆ ಎನು ಅಂದೆ ನೀನು ಅವತ್ತು
ತೋರಿಸುತಾನೆ ಈವತ್ತು
ಮೀಸೆಯ ತುಡಿಯನು ತಿರಿಸು ನಿನ್ನ ಪೊಗರನು ಇಳಿಸುವೆ ಹುಡುಗಿ
ಗಿರಗಿರಗಿರ ಬುಗುರಿಯ ತಿರುವಿ ನಿನ್ನ ಒಗಟನು ಬಿಡಿಸುವೆ ಬೆಡಗಿ
ಆರ್ ಪಾರ ಕಲ್ಲರಿ ಆರ್ ಪಾರ ಕಲ್ಲರಿ
ಬಾಯ್ ಮುಚ್ಚು ಬಜಾರಿ ಬಾಯಿ ಮುಚ್ಚು ಬಜಾರಿ
ಆರ್ ಪಾರ ಕಲ್ಲರಿ ಆರ್ ಪಾರ ಕಲ್ಲರಿ
ಆಟ ನೋಡೆ ಕುಮಾರಿ ಆಟ ನೋಡೆ ಕುಮಾರಿ

ತಕ್ಕ ಯಜಮಾನಿಗಿಂದು ಮಾನ ಹೋಯ್ತು
ಚಿಕ್ಕ ಯಜಮಾನನಿಗೆ ಆಟ ಸಿಕ್ಕಿತು
ಹೇ ಬುಗುರಿ ಬುಗುರಿ ಬುಗುರಿ ಭಲೇ ತಿರುಗುವ ಬಣ್ಣದ ಬುಗುರಿ
ಹೇ ಬುಗುರಿ ಬುಗುರಿ ಬುಗುರಿ ತಾಳೆ ತಿರುಗುವ ಜಂಬದ ಬುಗುರಿ