ಪಯಣ ತಿರುವ - The Indic Lyrics Database

ಪಯಣ ತಿರುವ

गीतकार - Kavya Mallar | गायक - Ishaan Dev, Madhuri Sheshadri | संगीत - Shriyansh Shreeram | फ़िल्म - Ayana | वर्ष - 2017

Song link

View in Roman

ಪಯಣ ತಿರುವ ಕಂಡಾಯ್ತು ದಿಕ್ಕು ದಿಕ್ಕು ಸೇರಾಯ್ತು
ಪಯಣ ತಿರುವ ಕಂಡಾಯ್ತು ಹೆಜ್ಜೆ ಹೆಜ್ಜೆ ಸೇರಾಯ್ತು
ಹೃದಯದಲಿ ಏಕಾಂತದಲಿ ಮೀಟೊ ಶ್ರುತಿಯು ನಿಂದೆ
ನೆನಪುಗಳ ಪುಟದಲ್ಲಿ ಕಂಡ ಹೆಸರು ನಿಂದೆ
ಬಾಳ ಪತ್ತಾಡಿ ಒಂಟಿ ಇದ್ದೆ ಅಲೆಯೇ ಬೆಳ್ಳಿ ಬಂದೆ
ಸ್ನೇಹ ಪ್ರೀತಿ ತೋರೋ ರೀತಿ ಕಂಡು ಇಂದು ಸೋತೆ

ಪಯಣ ತಿರುವ ಕಂಡಾಯ್ತು ಹೆಜ್ಜೆ ಹೆಜ್ಜೆ ಸೇರಾಯ್ತು

ಗಿರಿ ಬೆಟ್ಟ ಧಾರೆ ಬೆಳ್ಮುಗಿಲ ರಾಶಿಯೇ
ಪ್ರಕೃತಿಯ ಸವಿದು ನೋಡೆ
ಹೊಸಬಾಳು ಹಾಡಿದೆ ಖುಷಿಯನ್ನೇ ಹಾದಿ
ಸಹಚಾರಿಯೇ ನೀನೇ ಕೇಳೆ
ಮನಸಿನ ಒಂದು ನಾಡಲ್ಲಿ ಕನಸಿನ ಒಂದು ಗೂಡಲ್ಲಿ
ಹರಿಯುವ ಸ್ಪೂರ್ತಿ ನಿಂದೆನೆ ಕೇಳೆ
ಬದುಕಿನ ನೂರು ಜಂಜಾಟ ಗೆಲುವಿಗೆ ಮಾಡೋ ಕಾದಾಟ
ಗುರಿಯನು ಸೇರುವ ಹುಮ್ಮಸು ನೀನೆ

ಪಯಣ ತಿರುವ ಕಂಡಾಯ್ತು ದಿಕ್ಕು ದಿಕ್ಕು ಸೇರಾಯ್ತು
ಪಯಣ ತಿರುವ ಕಂಡಾಯ್ತು ಹೆಜ್ಜೆ ಹೆಜ್ಜೆ ಸೇರಾಯ್ತು

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಸರದಾ ಸತತಮ್

ನನ್ನೊಲುಮೆ ಪ್ರೇಮಿಯೇ ನಾನಾ ಜೀವ ಬಂಧುವೆ
ನಂಬಿಕೆಯ ನಾಲೆಯು ನೀನೆ
ನಗುವಿನ ನಾಡವೇ ಹರಿದಿದೆ ಎಲ್ಲೆದೆ
ಉಲ್ಲಾಸ ನಿನ್ನಿಂದ ಕೇಳೆ
ಚಿಕ್ಕ ಚಿಕ್ಕ ಆಸೆ ಪೂರೈಸಿ ಪುಟ್ಟ ಪುಟ್ಟ ಕೋಪ ಸಂತೈಸಿ
ಪ್ರತಿ ದಿನ ಅಪ್ಪಿ ಮುದ್ದದೋ ನೀನೇ
ಕನಸನು ಕಾಣೋ ಪ್ರೇಮಿಗು ಸೊಗಸನು ಕೇಳೋ ಆಸೆಗು
ಪ್ರೇರಣೆಯ ಹಕ್ಕಿಗಳು ನಾವೇ

ಪಯಣ ತಿರುವ ಕಂಡಾಯ್ತು ಹೆಜ್ಜೆ ಹೆಜ್ಜೆ ಸೇರಾಯ್ತು
ಪಯಣ ತಿರುವ ಕಂಡಾಯ್ತು ಹೆಜ್ಜೆ ಹೆಜ್ಜೆ ಸೇರಾಯ್ತು