ಅದುಗೆ ಮನೆಲ್ ಒಂದೂ ದಿನಾ ಫಂಕ್ಷನ್ ನಡೆದಿತ್ತು - The Indic Lyrics Database

ಅದುಗೆ ಮನೆಲ್ ಒಂದೂ ದಿನಾ ಫಂಕ್ಷನ್ ನಡೆದಿತ್ತು

गीतकार - N/A | गायक - Various | संगीत - Various | फ़िल्म - Album Children Rhymes | वर्ष - 2019

Song link

View in Roman

ಅದುಗೆ ಮನೆಲ್ ಒಂದೂ ದಿನಾ ಫಂಕ್ಷನ್ ನಡೆದಿತ್ತು
ಸೊಪ್ಪುಗಳೆಲ್ಲ ಸೇರಿಕೊಂಡು ಚಪ್ಪರ ಹಾಕಿಟ್ಟು

ದಾಂಟಿನ ಸೊಪ್ಪು ತಾನೆ ನಿಂತು ತೋರಣ ಮಾಡಿತ್ತು
ಕುಂಬಳ ಕಾಯಿ ಕುರ್ಚಿಲಿ ಕೂತು ಅಧ್ಯಕ್ಷನಾಯ್ತು

ಹರಿ ಬಂದ ಹೀರೆ ಕಾಯಿ ವಾಲಗ ಓದಿತ್ತು
ನುಗ್ಗಿ ಬಂದ ನುಗ್ಗೆಕಾಯಿ ಡೋಲು ಬಾರಿಸಿತ್ತು

ಸೌತೆಕಾಯಿ ಥಾಯ್ ಥೈ ಮಾಡಿ ಸ್ವಾಗತ ಎಂದಿತು
ಟೊಮೆಟೊ ತಾನೆ ಸುಂದ್ರಿ ಎಂದು ತಾಂಬೂಲ ಹಂಚಿತ್ತು

ಬಟ ಬಟ ಎಂದ ಬಟಾತೆ ಜೋರು ಭಾಷೆಂ ಬಿಗಿದಿತ್ತು
ಪಟ ಪಟ ಎನ್ನುವ ಪಡವಲಕಾಯಿ ಚಪ್ಪಲೆ ತಟ್ಟಿತ್ತು

ಎಲೆಕೋಸು ಕ್ಯಾರೆಟ್ ಒಟ್ಟಿಗೆ ಸೀರಿ ಮೇಕಪ್ ಮಾಡಿಟ್ಟು
ಕೆಂಪಗೆ ಇದ್ದ ಬೀಟ್ರೂಟ್ ಎಲ್ರಿಗೂ ಲಿಪ್ಸ್ಟಿಕ್ ಹಾಕಿತ್ತು

ಬೆಂಡೆಕಾಯಿ ಬಂದೆ ಎತ್ತಿ ಸಾಹಸ ಮಾಡಿಟ್ಟು
ತಡವಾಗಿ ಬಂದ ತೊಂಡೇಕಾಯಿ ಹಾಡ ಹೇಳಿತ್ತು

ಮೂಲೆಲ್ ಇದ್ದ ಮೂಲಂಗಿ ಶೂಟಿಂಗ್ ಮಾಡಿಟ್ಟು
ಜೀನ್ಸು ಹಾಕಿದ ಬೀನ್ಸು ಬಂದು ಡ್ಯಾನ್ಸ್-ಯು ಮಾಡಿಟ್ಟು

ಚೋಟು ಉದ್ದದ ಮೆಣಸಿನಕಾಯಿ ಥಕ ಥಕ ಕುಣಿದಿತ್ತು
ಬಾಳೆಹಣ್ಣು ಬಟ್ಟೆ ಬಚ್ಚೆ ನೃತ್ಯ-ಯು ಮಾಡಿಟ್ಟು

ಚಾಯ್ ಚಾಯ್ ಎನ್ನುತ ಚೀನಿಕಾಯಿ ಎಂಸಿ ಮಾಡಿಟ್ಟು
ಬದನೆಕಾಯಿ ಬಂದೋರ್ಗೆಲ್ಲ ವಂದನೆ ಹೇಳಿತ್ತು