ಸರಿ ನಾ ಹೋಗಿ ಬರುವೆ - The Indic Lyrics Database

ಸರಿ ನಾ ಹೋಗಿ ಬರುವೆ

गीतकार - Chi Udayashankar | गायक - S Janaki, P B Srinivas | संगीत - G K Venkatesh | फ़िल्म - Prathidhwani | वर्ष - 1971

Song link

View in Roman

ಸರಿ ನಾ ಹೋಗಿ ಬರುವೆ
ಮತ್ತೆ ನೀ ಎಂದು ಬರುವೆ ?
ಸರಿ ನಾ ಹೋಗಿ ಬರುವೆ
ಮತ್ತೆ ನೀ ಎಂದು ಬರುವೆ
ಬಾ ಎಂದಾಗ
ಬರುವೆಯ ಬೇಗ
 ಓ
ನಾಳೆ ಸಂಜೆ
ಉಹುಂ, ಇನ್ನೂ ಮುಂಚೆ
ಎಲ್ಲಿ
ಅಲ್ಲೇ .....ಯಾರು ನೋಡದ ಜಾಗದಲಿ
ಸರಿ ನಾ ಹೋಗಿ ಬರುವೆ

ಕಣ್ಣ ಮುಂದೆ ಮುಂಗುರುಳ ಆಟವೇನು
ಕಿರುನುಡಿ ಹೇಳುವ ನುಡಿಯೇನು
ಕಣ್ಣ ಮುಂದೆ ಮುಂಗುರುಳ ಆಟವೇನು
ಕಿರುನುಡಿ ಹೇಳುವ ನುಡಿಯೇನು
ಸಂಜೆ ಕೆಂಪು ಬಣ್ಣ ,.....
ಈ ಕೆನ್ನೆ ಮೇಲಿದೇನು ?

ಬೇಡ ಬೇಡ ಎಂದರು ಕೆಳಿದೆಯ
ನೀಡಿದೆ ನೀ ಸಿಹಿ ಕಾಣಿಕೆಯ
ಆ ಚೆಲ್ಲಾಟಕೆ, ..... ರಂಗೇರಿತು ಬಿಡು ನನ್ನ
ಊಂ, ಸರಿ
ಊಂ ,ಸರಿ ನಾ ಹೋಗಿ ಬರುವೆ
ಮತ್ತೆ ನೀ ಎಂದು ಬರುವೆ ?


ನನ್ನ ಪುಣ್ಯ ಇಲ್ಲಿ ಯಾರೂ ನೋಡಲಿಲ್ಲ
ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ನನ್ನ ಪುಣ್ಯ ಇಲ್ಲಿ ಯಾರೂ ನೋಡಲಿಲ್ಲ
ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ಕೈಯ ಬಿಡು ಸಾಕು......
ನಾಬೇಗ, ಹೋಗಬೇಕು


ಅಂದದಿಂದ ಮನಸನು ಸೆರೆ ಹಾಕಿ
ಮೆಲ್ಲಗೆ ಓಡಲು ನೋಡುವೆಯ
ಹೂಂ
ನಿನ್ನ ನಾನು ಬಲ್ಲೆ .....,
ಆಸೆ ನನ್ನ ಮೇಲೆ ಅಲ್ಲವೇನು

ಹೂಂ ಹೂಂ ಹೂಂ.(ನಗು)....ಏನಿಲ್ಲ
ಸರಿ ನಾ ಹೋಗಿ ಬರುವೆ
ಟಾಟಾ .....ಟಾಟಾ.....