ಏಕೋ ಏನೋ ಹಾಡುವ ಆಸೆ - The Indic Lyrics Database

ಏಕೋ ಏನೋ ಹಾಡುವ ಆಸೆ

गीतकार - Chi Udayashankar | गायक - P B Srinivas | संगीत - G K Venkatesh | फ़िल्म - Prathidhwani | वर्ष - 1971

Song link

View in Roman

ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ

ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ

ಅದೇನೋ ಅರಿಯೇ ಒಂದು ತಿಳಿಯೆ ಹರುಷಾ ತುಂಬಿದೆ...

ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ

 

ನಿನ್ನಾ ಈ ಚೆಲುವಾ ನಗುವ ಮೊಗವ ಸೊಬಗನು ಕಂಡೆ

ನಿನ್ನಾ ಈ ತನುವ ಕಾಂತಿ ತರುವ ಮೋಹದಿ ನಿಂದೇ

ನಿನ್ನಾ ಈ ಚೆಲುವಾ ನಗುವ ಮೊಗವ ಸೊಬಗನು ಕಂಡೆ

ನಿನ್ನಾ ಈ ತನುವ ಕಾಂತಿ ತರುವ ಮೋಹದಿ ನಿಂದೇ

ಬಳಿಗೆ ಬಂದೇ... ನನ್ನೇ ಮರೆತೇ....

ಬಾಳು ಸುಖದ.. ಪ್ರೇಮಗೀತೆ ಇಂದು

ಏಕೋ ಏನೋ ಹಾಡುವ ಆಸೆ ಹೃದಯಕೆ ಬಂದಿದೆ

 

ನಿನ್ನಾ ಈ ನಡೆಯ ಮಧುರ ನುಡಿಯ ಮೋಡಿಗೆ ಸಿಲುಕಿ

ನಿನ್ನಾ ಈ ಸನಿಹ ತಂದ ಸಿಹಿಯ ಬಯಕೆಯೂ ಕೆಣಕಿ

ನಿನ್ನಾ ಈ ನಡೆಯ ಮಧುರ ನುಡಿಯ ಮೋಡಿಗೆ ಸಿಲುಕಿ

ನಿನ್ನಾ ಈ ಸನಿಹ ತಂದ ಸಿಹಿಯ ಬಯಕೆಯೂ ಕೆಣಕಿ

ಮಿಲನ ತಂದ... ಸಲಿಗೆಯಿಂದ..

ಒಲವು ತಂದ ... ಸರಸದಿಂದ... ಬಂದೇ

ಏಕೋ ಏನೋ ಹಾಡುವ ಆಸೆ....

ಆಸೆ ಹೃದಯಕೆ ಬಂದಿದೆ