ತಾವರೂರ ಮನೆಯ ನೋಡ ಬಂದೆ - The Indic Lyrics Database

ತಾವರೂರ ಮನೆಯ ನೋಡ ಬಂದೆ

गीतकार - Folk | गायक - Manjula Gururaj | संगीत - G. V. Atri | फ़िल्म - Folk Songs | वर्ष - 2018

Song link

View in Roman

ತಾವರೂರ ಮನೆಯ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ
ತಾವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿ ಹಿಂದೆ
ಮುತ್ತಿನನಾಥ ಜೋಪಾನವಾಗಿ ಬಾಳಿದೆ
ಅದು ಎತ್ತ ಹೋದರು ಕನಸಾಗಿದೆ

ತಾವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಬಾಗಿಲ ಮುಂಡೆ ರಂಗೋಲಿ
ಬಾಗಿ ಹಿಡಿದಿದ್ದೆ ನಾನಾ ತರದಲ್ಲಿ
ಬಾಗಿಲ ಮುಂಡೆ ರಂಗೋಲಿ
ಬಾಗಿ ಹಿಡಿದಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮಾಂಸಲಿ
ಅದು ಮರೆಯಾದು ಈ ಬಾಳಿನಲ್ಲಿ

ತಾವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಅತ್ತಿಗೆ ಕೈಗೊಂಬೆ ಅಣ್ಣಾ
ಎತ್ತಿ ಮುದ್ದಾಡಿದ ತಂಗಿ ಮರೆತ
ಅತ್ತಿಗೆ ಕೈಗೊಂಬೆ ಅಣ್ಣಾ..
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕನ್ನೆತ್ತಿ ಸಹ ನೋಡಬಾರದೆ
ತಂಗಿ ಬಾರಮ್ಮ ಇತ್ತ ಏನಬಾರದೆ

ತಾವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ..

ಅಣ್ಣನ ಹೆಂಡತಿ ನೋಡಿ
ಕಣ್ಣ ಸಣ್ಣೆ ಮಾಡಿದಲೆನ್ನ ನೋಡಿ
ಅಣ್ಣನ ಹೆಂಡತಿ ನೋಡಿ
ಕಣ್ಣ ಸಣ್ಣೆ ಮಾಡಿದಲೆನ್ನ ನೋಡಿ
ಅಣ್ಣ ಮಾತಾಡಿಸದೊಳ ಸೇರಿದಾ.. ಆ.. ಆ..
ಅಣ್ಣ ಮಾತಾಡಿಸದೊಳ ಸೇರಿದಾ
ತನ್ನ ಸಿರಿಯಲ್ಲಿ ತಾನೊಡಗೂಡಿಯಾ..

ತಾವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಶಿವನೇ.. ಈ.. ಶಿವನೇ... ಶಿವನೇ...
ಶಿವನೆ ನಾ ಕೈಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ ಅನ್ನಗೆ
ತಾಯಿ ಜಗದಾಂಬೆ ಕೈ ಮುಗಿದು ಬೇಡುವೆ
ಕಾಯಿ ಕರ್ಪೂರದಾರತಿ ಬೆಳಗುವೆ
ತಾಯಿ ಜಗದಾಂಬೆ ಕೈ ಮುಗಿದು ಬೇಡುವೆ
ಕಾಯಿಯ ಕರ್ಪೂರದಾರತಿ ಬೆಳಗುವೆ...