ಒಲವೇ ಹೂವಾಗಿ ಬಲಿಬಂಡೆ - The Indic Lyrics Database

ಒಲವೇ ಹೂವಾಗಿ ಬಲಿಬಂಡೆ

गीतकार - Chi. Udaya Shankar | गायक - S. P. Balasubrahmanyam | संगीत - Upendra Kumar | फ़िल्म - Ratha Sapthami | वर्ष - 1986

Song link

View in Roman

ಒಲವೇ ಹೂವಾಗಿ ಬಲಿಬಂಡೆ
ಒಲವೆ ಹೊಸ ಆಸೆ ಸಾವಿರ ತೋರಿದೆ
ಒಲವೇ.. ಒಲವೇ
ಸವಿ ಜೇನು ನೀನು
ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ..
ಒಲವೆ

ಮೇಲೆ ಬಾನಿನಲಿ ತೇಲಿಹೋಗುತಿದೆ
ಸಿಡಿಲು ಬಂದಂತೆ ಆಯ್ತೆ
ಏತಕೆ?

ಪ್ರೇಮ ಗಾನವನು ಸೇರಿ ಹಾಡುತಿರೆ
ಕೊರಲು ಕುಯ್ದಂತೆ ಆಯ್ತೆ
ಏತಕೆ?

ಬೆಳಕನ್ನು ನೋಡುವ ಕಂಗಾಲಾದ
ಬೆಳಕನ್ನು ಆರಿಸಿ
ಬಿರುಗಾಳಿಯಂಥಾದೆ
ಬಿರುಗಾಳಿಯಂಥಾದೆ
ಹೀಗೇಕೆ ವಿಷವಾದೆ..ಈ
ಒಲವೇ..

ಜೀವ ವೇದನೆಯ ರಾಗ ಹಾಡುತಿರೆ
ಬದುಕೇ ವಿಷಾದವಾಯ್ತು
ಈ ದಿನಾ

ದೇಹ ಪ್ರಾಣಗಳು ಬೇರೆಯಾಗುತಿಹೆ
ಕನಸು ಕಂಡಂತೆ ಆಯ್ತೆ
ಈ ಕ್ಷಣ

ಎದೆಯಲ್ಲಿ ಬೆಳಗುವ ದೀಪವ
ರೋಷದಿ ಆರಿಸೋ
ಬಿರುಗಾಳಿ ಏಕಾಡೆ
ಬಿರುಗಾಳಿ ಏಕಾಡೆ
ಹೀಗೇಕೆ ವಿಷವಾದೆ..
ಒಲವೆ

ಹೂವಾಗಿ ಬಲಿಬಂಡೆ
ಒಲವೆ ಹೊಸ ಆಸೆ ಸಾವಿರ ತೋರಿದೆ
ಒಲವೇ.. ಒಲವೇ
ಸವಿ ಜೇನು ನೀನು
ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ
ಹೀಗೇಕೆ ವಿಷವಾದೆ..
ಒಲವೆ