ನಿಲ್ಲು ನನ್ನ ಜೀವವೇ. - The Indic Lyrics Database

ನಿಲ್ಲು ನನ್ನ ಜೀವವೇ.

गीतकार - R. N. Jayagopal | गायक - S. P. Balasubrahmanyam, S. Janaki | संगीत - Sathyam | फ़िल्म - Brahmasthra | वर्ष - 1986

Song link

View in Roman

ನಿಲ್ಲು
ನನ್ನ ಜೀವವೇ.. ನಿಲ್ಲು

ಕನ್ನಡಮ್ಮನ ದೇವಾಲಯ
ಕಂಡೆ ನಿನ್ನ ಕಂಗಳಲಿ
ಕನ್ನಡ ನಾಡಿನ ಚರಿತೆಯನೆ
ಕಂಡೆ ನಿನ್ನ ಹೃದಯದಲಿ
ವಂದನೆ ನಿನ್ನ ನೀತಿಗೆ
ವಂದನೆ ಅರ್ಧಾಂಗಿಗೆ..

ಅನುಮನವೆಂಬ ಬ್ರಹ್ಮಾಸ್ತ್ರವದು
ಅಂಧನ ಮಾಡಿತು ನನ್ನಣ್ಣು

ಸತ್ಯದ ದೀಪವು ಕತ್ತಲೆ ನೀಗಿ
ತೆರೆಸಿತು ನನ್ನಯ ಕಣ್ಣನು

ಚುಕ್ಕಣಿಯೇ ಹೋದ ಮೇಲೆ
ದಿಕ್ಕು ಎಲ್ಲಿ ಧೋನಿಗೆ
ದೇವಿ ಇಲ್ಲದೇ ಗುಡಿಯಲ್ಲಿ
ಆರಾಧನೆ ಯಾರಿಗೆ..

Yaaarigaagi Ethakkaagi
ಯಾರಿಗಾಗಿ ಬಾಳಲಿ
ಎತ್ತಕ್ಕಾಗಿ ಬಾಳಲಿ

ಬದುಕು ಭಾರವಾಗುತಿದೆ
ಬದುಕಬೇಡ ಎನ್ನುತಿದೆ
ಮರು ಜನ್ಮದ ಸಂಗತಿಯು ನೀನೆ ಆಗಲಿ
ಈ ಜನ್ಮದ ಸಂತೋಷವು ಆ ಜನ್ಮದೆ ಸಿಗಲಿ
ಈ ನಂಬಿಕೆ
ಈ ನಿಶ್ಚಯತೇ
ಈ ಬಾಳ ದೀಪ ಆರುತ್ತಿದೆ

ನಿಲ್ಲು
ನನ್ನ ಜೀವವೇ.. ನಿಲ್ಲು

ನೀವಿಲ್ಲದೇ ಈ ತಾಳಿಗೆ
ಅರ್ಥವೆನೈಡೆ

ನೀನಿಲ್ಲದ ಈ ಬಾಲಿದು
ವ್ಯರ್ಥವಾಗಿದೆ

ದೇವರಿರುವ ಗುಡಿಯ ಬಿಟ್ಟು ಹೋದ ನನ್ನ ಕ್ಷಮಿಸಿರಿ
ದೇವಿಯನ್ನು ದೂಷಿಸಿದಂತ ನನ್ನ ನೀನು ಕ್ಷಮಿಸೆಯಾ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ಕಳೆಯಲಿ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ತೊಳೆಯಲಿ
ಹೊಸ ಜೀವದ ಆನಂದದವು ಈ ಬಾಳನು ಬೆಳಗಲಿ..

ಕನ್ನಡ ನಾಡಿನ ಚರಿತೆಯನೆ
ಕಂಡೆ ನಿನ್ನ ಹೃದಯದಲಿ
ಕನ್ನಡಮ್ಮನ ದೇವಾಲಯ
ಕಂಡೆ ನಿನ್ನ ಕಂಗಳಲಿ
ವಂದನೆ ನಿನ್ನ ಮಾತಿಗೆ
ವಂದನೆ ನಿನ್ನ ನೀತಿಗೆ..