ಜನುಮದ ಜೋಡಿ ನೀನು - The Indic Lyrics Database

ಜನುಮದ ಜೋಡಿ ನೀನು

गीतकार - Doddarange Gowda | गायक - Rajesh Krishnan, Manjula Gururaj | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಜನುಮದ ಜೋಡಿ ನೀನು ಕನಕ ಕನಕಾ
ಹುಡುಗನ ಪ್ರಾಣ ನೀನು ಕೊನೆಯ ತನಕ
ಸುವ್ವಿಸುವ್ವಾಲೆ ಬಾಲೆ
ಕುಸುಮ ಸಿರಿಗಂಧ ಮಾಲೆ
ಮ್ಯಾಲೆ ಮ್ಯಾಲೆ ಮ್ಯಾಲೆ ಮಲ್ಲೇ ಹೂ ಮ್ಯಾಲೆ

ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾ ತನಕ

ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೇ ತೊಡಿಸಿದೆ ನೀ ಮುದ್ದಿನ ಒಡವೆ
ಒಡವೆತೊಡದೆ ನೀ ಚೆಲುವೆರ ಚೆಲುವೆ
ಎದೆತುಂಬಿಕೊಳ್ಳಲು ನಿನ್ನ ಪಡೆದೆ
ನಿನ್ನಪ್ರೀತಿ ಚಿಲುಮೆಯೆ ಎಂದೆಂದಿಗು
ಗೆಲುವುತರುವ ವರವೇ
ಅದುಯಾವ ಜನುಮದಲೋ ಆಗೈತೆ
ನನಗೂನಿನಾಗು ಮದುವೆ
ನಿನಜೋಡಿ ಮಾಡಿದಾ ಆ ದೇವಗೆ
ಕೈಮುಗಿವೆ ಮುಗಿವೆ

ಜನುಮದ ಜೋಡಿ ನೀನು ಕನಕ ಕನಕಾ
ಹುಡುಗನ ಪ್ರಾಣ ನೀನು ಕೊನೆಯ ತನಕ

ಮೊದಲನೆಯ ನೋಟದಾಗೆ ಸೆಳೆದೆ ನೀ ಮನಸಾ
ಶಿವರಾತ್ರಿ ತಂದೇ ನೀ ದಿವಸ ದಿವಸ
ನಂಗೂ ಹಂಗಾಗೈತೆ ಕೇಳಯ್ಯ ಅರಸ
ಒಳಒಳಗೆ ಹಾಡೈತೆ ಹೃದಯ ಸಾರಸ
ನೆಲಮುಗಿಲು ಸೇರಿದರು ಬೆರಗಾದು ನಮ್ಮ ಬಾಳ ಕಲಶ
ಒಡಲಾಳಚಂದದಲಿ ಹೇಳೈತೆ ಪ್ರೀತಿ ಕಥೆಯ ಸೊಗಸ
ನಮ್ಮ ಬದುಕ ಹರಕೆಯ ಪೂರೈಸಲು ದಿನವು ಹರುಷ ಹರುಷ

ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾ ತನಕ
ಇದುಯಾವ ದೈವ ಲೀಲೆ ಮನಸಾಯ್ತು ನಿನ್ನ ಮೇಲೆ
ಮೇಲೆ ಮೇಲೇ ತೇಲಿ ಹೋದೆ ನಾ