ಕೋಲುಮಂದೆ ಜಂಗುಮ ದೇವರು - The Indic Lyrics Database

ಕೋಲುಮಂದೆ ಜಂಗುಮ ದೇವರು

गीतकार - Doddarange Gowda | गायक - L. N. Shastri | संगीत - V. Manohar | फ़िल्म - Janumada Jodi | वर्ष - 1996

Song link

View in Roman

ಕೋಲುಮಂದೆ ಜಂಗುಮ ದೇವರು
ಗುರುವೇ ಕ್ವಾರಣ್ಯಕ್ಕೆ ದಯಮಾಡವ್ರೆ

ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ
ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ

ಕೊಡುವಾಗಲೆಲ್ಲಾ ಕೊಡ್ತಾನು ನಮ್ಮಪ್ಪ ಶಿವ
ಅವನುಒಲಿದರೆ ಕೊರಡು ಕೊನಾರಿ ಬಂಗಾರ ಬಾಳವ್ವ
ಅಕ್ರೇಮಾತಾಯೀ ಭಿಕ್ಷೆ ಹಾಕವ್ವ ಅಂದವ್ನೆ ಮಾದೇವ

ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ
ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ

ತಾಯಿಯಂದ್ರೆ ತಾಯಿ ಆಗ್ಬೇಕಿಲ್ಲ ತಾಯಿ
ಲಗ್ನ ಆಗದೇ ಇರೋ ಹೆಣ್ಮಗಳು ತಾಯಿ
ಭಿಕ್ಷೆ ನೀಡಿದರೆ ಬಾಳು ಬಂಗಾರ ತಾಯಿ
ಬೈದು ದೂಡಿದರೆ ಬಾಳು ಬೂದುಗುಂಬಳಕಾಯಿ ಅಂದವ್ನೆ ಮಾದೇವ

ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ
ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ

ಹುಡುಗಂದ್ರೆ ಚಿಕ್ಕ ಹುಡುಗಿ ಅಲ್ಲ ತಾಯಿ
ಕಂಕಣ ಭಾಗ್ಯ ಬಾರೋ ಕನ್ಯಾಮಣಿ ತಾಯಿ
ಭಿಕ್ಷೆ ನೀಡಿದರೆ ಸಿರಿ ಸಿಂಗಾರ ತಾಯಿ
ಬೈದು ದೂಡಿದರೆ ನಿನ್ನ ಬಾಳು ಬೆಂಡೆಕಾಯಿ ಅಂದವ್ನೆ ಮಾದೇವ

ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ
ಕ್ವಾರಣ್ಯ ನೀಡವ್ವ ಕೋರಗಲ್ಲ ಮಾದೇವನಿಗೆ

ಶುಭವಾಗು ತಾಯಿತಮ್ಮೋ ಶುಭವಾಗು ತಾಯಿತಮ್ಮೋ
ಹೆತ್ತೋರ ಪುಣ್ಯವು ಮುತ್ತಾಗಿ ಬಂತಮ್ಮೋ
ಮುತ್ತಂತ ಭಾಗ್ಯವ ಬಾಗಿಲಿಗೆ ತಂತಮ್ಮೋ

ದೇವರ ಗುಡ್ಡ ಬಂದು ಭಕ್ತಿಯಿಂದ ಶಿವನ ನೆನೆದು ಹಾಗೆ ಅಲೆಲೆಲೆಲೆ
ಭೂದೇವಿ ಕೈಯ ಚಾಚಿ ಆಕಾಶ ಮುಟ್ಟುತಾವು ನೋಡೆ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ

ಬಾಣವೆಲ್ಲಾ ಹೂವಾದೋ ಹೂವೆಲ್ಲಾ ಘಮ ಎಂದೋ
ಕೈಯೆತ್ತಿ ಕ್ವಾರಣ್ಯ ಭಿಕ್ಷೆಯ ನೀಡವ್ವೋ
ಮಾಡೇವ್ನ ಮನಸಾರೆ ರಕ್ಷಣೆ ಕೇಳವ್ವೋ

ನೆತ್ತಿಯ ಸೂರ್ಯಸ್ವಾಮಿ ಕತ್ಲೆ ಮನೆಗೆ ಹೋಗೋ ಹೊತ್ತು
ಚಿತ್ತಾವ ಗಟ್ಟಿ ಮಾಡಿ ಇತ್ಲಾಗಿ ತುಳಿದ್ರೆ ಮುಟ್ಟು ನೋಡೋ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ

ಕಾಡೋರ್ಗೆ ಕಾಣ್ತಾನೋ ಕಂಡೋರ್ಗೆ ನೀಡ್ತಾನೋ
ಮುಂಗಾರ ಮಳೆ ಬರಲು ಸೋಗೆಯು ಕುಣಿದಾವೊ
ಬಾಯಾರಿ ನೆನೆದೊಡಲ ಕಣ ಕನವು ಮಣಿದಾವೋ

ಕೊರ್ಗಲ್ಲ ಗುಡ್ಡೆ ಮ್ಯಾಗೆ ಮಾದೇವ ಬಂದೆ ಬರುತಾಣವ್ವೋ
ನಂಬಿದ ಭಕ್ತರಿಗೆಂದು ಪ್ರೀತಿಯ ಕೊಟ್ಟೆ ಕೊಡುತಾನವ್ವೋ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ

ಮಾತಾದ್ಯವೋ ಲಿಂಗ ಮಾತಾದ್ಯವೋ
ಶರಣೆಂದವೋ ಬಾಣವು ಶರಣೆಂದವೋ