ಹುಚ್ಚರಲ್ಲಾ ನೀನು - The Indic Lyrics Database

ಹುಚ್ಚರಲ್ಲಾ ನೀನು

गीतकार - Vijayanarasimha | गायक - P. Susheela | संगीत - Vijaya Bhaskar | फ़िल्म - Mallammana Pavaada | वर्ष - 1969

Song link

View in Roman

ಹುಚ್ಚರಲ್ಲಾ ನೀನು ಹುಚ್ಚರಲ್ಲಾ
ಹುಚ್ಚರಲ್ಲಾ ನೀನು ಹುಚ್ಚರಲ್ಲಾ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೆ ಹುಚ್ಚರು
ಹುಚ್ಚರಲ್ಲಾ ನೀನು ಹುಚ್ಚರಲ್ಲಾ

ಆಸೆ ಲತೆಯ ಚಿಗುರಿನಲ್ಲೆ ಚಿವುಟುವಂಥ ಹೀನರು
ಕಬ್ಬಿನ ಜಲ್ಲೆ ಡೊಂಕು ಕಂಡು ರಸವೆ ಕಹಿ ಎನುವರು
ನಂಜು ನಾಲಿಗೆ ಇಂದ ಮಾನವ ಚುಚ್ಚಿ ನಗುವರು
ಅವರ ಮನಿಸಿ ನಾವೇ ಹುಚ್ಚ ಎನುವ ನೀವೆ ದೇವರು

ಹುಚ್ಚರಲ್ಲಾ ನೀನು ಹುಚ್ಚರಲ್ಲಾ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೆ ಹುಚ್ಚರು
ಹುಚ್ಚರಲ್ಲಾ ನೀನು ಹುಚ್ಚರಲ್ಲಾ

ಸೋಲು ನಮ್ಮ ಬಾಳಿನಲ್ಲಿ ಗೆಲ್ಲುವ ಮೆಟ್ಟಿಲು
ಒಂದೆ ಜೀವ ಎರಡು ದೇಹ ಆಗಿ ಅವರ ಮೆಟ್ಟಲು
ಸೋಲು ನಮ್ಮ ಬಾಳಿನಲ್ಲಿ ಗೆಲ್ಲುವ ಮೆಟ್ಟಿಲು
ಒಂದೆ ಜೀವ ಎರಡು ದೇಹ ಆಗಿ ಅವರ ಮೆಟ್ಟಲು
ಸಮಯ ಸಾದಕ ಜನರೂ ಆಗ ಮೆಚ್ಚಿ ಮೆಚ್ಚಿ ಹಾಡು
ಅವರ ಮನಿಸಿ ನಾವೇ ಹುಚ್ಚ ಎನುವ ನೀವೆ ದೇವರು

ಹುಚ್ಚರಲ್ಲಾ ನೀನು ಹುಚ್ಚರಲ್ಲಾ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೆ ಹುಚ್ಚರು
ಹುಚ್ಚರಲ್ಲಾ ನೀನು ಹುಚ್ಚರಲ್ಲಾ