ಗಂಗೆಯ ತುಂಗೆಯ ಪ್ರೀತಿಯ - The Indic Lyrics Database

ಗಂಗೆಯ ತುಂಗೆಯ ಪ್ರೀತಿಯ

गीतकार - R. N. Jayagopal | गायक - S. P. Balasubrahmanyam | संगीत - Koti | फ़िल्म - Jeevanadi | वर्ष - 1996

Song link

View in Roman

ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನೆ ಪುಣ್ಯ ನದಿ
ಬಲುಕುತ ಕುಲುಕುತ ಹರುಷವ ಚೆಲ್ಲುತ ಸಾಗುವ ಧಾನ್ಯ ನದಿ
ತಾ ಹೆಜ್ಜೆಯ ಇಟ್ಟೆಡೆ ಅಮೃತ ಹರಿಸಿ ಕಾಯುವ ಭಾಗ್ಯ ನಡಿ

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ
ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ
ಸಂತೋಷದ ಸಕ್ಕರೆ
ಮಮತೆಯ ಮಾತೆಗೆ
ಭಾಗ್ಯದಾ ಧಾತೆಗೆ
ಮಾಡುವೆ ಭಕ್ತಿಯ ವಂದನೆ..

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಊ ಜೀವನದಿ.. ಈ ಕಾವೇರಿ

ಕೊಡಗಲಿ ನೀ ಹುಟ್ಟಿ
ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲು
ಆನಂದ

ಹಸಿರಿನ ಬೇಳೆ ತಾಂಡು
ಕುಡಿಯುವ ಜಲ ತಂದು
ಚೆಲುವೆ ನಗೆ ಎಂಬಾ
ಶ್ರೀಗಂಧ

ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ
ಬಯಲಲಿ ಕಾದಲಿ ಕಾಲಕಾಲ ಹರಿಯುತ ನಾಟ್ಯವ ಮಾಡುವೆ
ಮಂದಗಾಮಿನಿ ಶಾಂತಾ ವಾಹಿನಿ
ಚಿರ ನೂತನ ಚೇತನ ಧಾತೆಯು ನೀನೆ ದಕ್ಷಿಣ ಮಂದಾಕಿನಿ

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಊ ಜೀವನದಿ.. ಈ ಕಾವೇರಿ

ಹುಟ್ಟುವ ಕಡೆಯೊಂದು ಫಲ
ಕೊಡೋ ಕಡೆಯೊಂದು
ಸಾಗರದಲಿ ನಡಿಗೆಂದು ಸಂಗಮವು

ತಾವ್ರಿನ ಮನೆಯೊಂದು
ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಯೆಂದು ಜೀವನವು

ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲ ದೂರವು
ಹೊಸ ಮನೆ ಹೊಸ ಜನ ಹೊಸ ಹೊಸ ಬಾಂಧವು ಅಲ್ಲೇ ಸಂತೋಷವು
ಮನೆಯ ದೀಪವು ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವು

ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಊ ಜೀವನದಿ.. ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಓ ದೇವನದಿ.. ಈ ವಯ್ಯಾರಿ
ಈ ತಾಯಿಯು ನಕ್ಕರೆ..
ಸಂತೋಷದ ಸಕ್ಕರೆ..
ಮಮತೆಯ ಮಾತೆಗೆ
ಭಾಗ್ಯದಾ ಧಾತೆಗೆ
ಮಾಡುವೆ ಭಕ್ತಿಯ ವಂದನೆ..