ಈ ಅಂದದ ಚೆಂದದ - The Indic Lyrics Database

ಈ ಅಂದದ ಚೆಂದದ

गीतकार - R. N. Jayagopal | गायक - S. P. Balasubrahmanyam | संगीत - Koti | फ़िल्म - Jeevanadi | वर्ष - 1996

Song link

View in Roman

ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಕೆನ್ನೆಯ ಮೇಲೆ ನೂತನ ಕಾಂತಿ ಯಾಕೆ ಹೇಳಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ
ಲಾಲಿ ಹಾಡೋಕೆ ವೇಳೆ ಬಂತಂತೆ

ಹಾಯ್ ಬಲು ಮುದ್ದು
ತುಂಟನೊಬ್ಬ ಮನೆಗೆ ಬರ್ತಾನೆ
ಅವ ಈ ತಾಯಿ ಅಂದವೆಲ್ಲಾ ಕದ್ದು ಥರತಾನೆ
ಈ ಕಲೆಯು.. ಈ ಹೊಳಪು ಆ ಕಥೆಯ ಹೇಳುತಿದೆ

ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಕೆನ್ನೆಯ ಮೇಲೆ ನೂತನ ಕಾಂತಿ ಯಾಕೆ ಹೇಳಮ್ಮ..

ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮಾ
ಸುಕುಮಾರಿ ವಯ್ಯಾರಿ ಮೃದುವಾಗಿ ನಡೆಯಮ್ಮ
ಮಲ್ಲಿಗೆಯ ಹಾಸುವೆನು ನಡೆಯುವ ದಾರಿಯಲಿ
ಸೊಂಟವಿದು ಉಳುಕೀತು ಜೋಪಾನ
ಹೆಜ್ಜೆಯಲ್ಲಿ ಲಜ್ಜೆ ಇದೆ ಕಣ್ಣಲ್ಲಿ ಆಸೆ ಕಂಡೆ

ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಕೆನ್ನೆಯ ಮೇಲೆ ನೂತನ ಕಾಂತಿ ಯಾಕೆ ಹೇಳಮ್ಮ..

ನಗುವಾಗ ನೀ ಕಂಡ ಮನೆಗೆಲ್ಲ ರಂಗೋಲಿ
ನಮ್ಮೆಲ್ಲ ಹಾರಿಕೆ ನಿನಗುಂಟು ಬಾಳಲ್ಲಿ
ನಿನ್ನಯ ತೊಡಲು ನುಡಿ ಜೇನಿನ ರಸ ಮಳೆಯು
ಮನಸಿಗೆ ನೀ ತಂದೆ ಆನಂದ
ನಿನ್ನಿಂದ ಈ ಮನೆಯು ಗೋಕುಲಕೆ ಸತ್ಯಂತೆ

ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ನೂತನ ತಾಯಿಯ ಜಂಬದ ನೋಟ ಬಲ್ಲೆ ನಾನಮ್ಮ
ತೊಟ್ಟಿಲ ಕಟ್ಟೋಕೆ ಕಾಲ ಈಗಮ್ಮ
ಲಾಲಿ ಹಾಡೋಕೆ ವೇಳೆ ನೋಡಮ್ಮಾ
ಹಾಯಿ ಬಲು ಮುದ್ದು ತುಂಟನೊಬ್ಬ ಮನೆಗೆ ಬಂದಾಯ್ತು
ಅವ ಈ ತಾಯಿ ಅಂದವೆಲ್ಲಾ ಕದ್ದು ಥರತಾನೆ
ಈ ಕೇಳು.. ಈ ಹೋಳು ಆ ಕಥೆಯ ಹೇಳುತಿದೆ