ಮೂಡಲ್ ಕುಣಿಗಲ್ ಕೆರೆ - The Indic Lyrics Database

ಮೂಡಲ್ ಕುಣಿಗಲ್ ಕೆರೆ

गीतकार - Jaanapadasong | गायक - Surekha,Suneetha,Premalathanarisimaha Naik,Manjunath | संगीत - Sadhu Kokila | फ़िल्म - Janapada | वर्ष - 2001

Song link

View in Roman

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂಡೈಭೋಗ
ಮೂಡಿ ಬರ್ತಾನೆ ಚಂದಿರರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಮ

ಅಂತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದು ಐಭೋಗ
ಮೂಡಿ ಬರ್ತಾನೆ ಚಂದಿರಮಾ
ತಾನಂದನೋ ಮೂಡಿ ಬರ್ತಾನೆ ಚಂದಿರಮಾ

ಅಂತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್ ಕೆರೆ
ಭಾವ ತಂದಾನೋ ಬಣ್ಣದ ಸೀರೆ
ತಾನಂದನೋ ಭಾವ ತಂದಾನೋ ಬಣ್ಣದ ಸೀರೆ

ನಿಂಬೆಯ ಹಣ್ಣಿನಂತೆ ತುಂಬಿ ಕುಣಿಗಲ್ ಕೆರೆ
ಅಂದ ನೋಡಲು ಶಿವ ಬಂದ್ರು
ತಾನಂದನೋ ಅಂದ ನೋಡಲೂ ಶಿವ ಬಂದ್ರು

ಹೇಯ್ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂಡೈಭೋಗ
ಮೂಡಿ ಬರ್ತಾನೆ ಚಂದಿರರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಮಾ

ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಅಂದಾನೆ ನೋಡು ಶಿವ ಬಂದ್ರು ಶಿವಯೋಗಿ
ಕಬ್ಬಕಿ ಬಾಯ ಬಿಡುತಾವೆ
ತಾನಂದನೋ ಕಬ್ಬಕ್ಕಿ ಬಾಯ ಬಿಡುತಾವೆ

ಕಬ್ಬಕ್ಕಿನೆ ಬಾಯಿ ಬಿಡುತಾವೇ ನಿಬಿಡದಾ
ಗಬ್ಬಡ್ ಹೊಂಬಾಳೆ ನಡುಗ್ಯಾವೇ
ತಾನಂದನೋ ಗಬ್ಬಡ್ ಹೊಂಬಾಳೆ ನಡುಗ್ಯಾವೆ

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂಡೈಭೋಗ
ಮೂಡಿ ಬರ್ತಾನೆ ಚಂದಿರರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಮಾ

ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಹಾಕಾಕ್ಕೊಂಡ್ ಹರಿಗೋಳು ನೂಕಾಕ್ಕೊಂಡ್ ಊರುಗೋಳು
ಬೊಬ್ಬೆ ಹೊಡೆದಾವೆ ಬಾಳೇಮೀನು
ತಾನಂದನೋ ಬೊಬ್ಬೆ ಹೊಡೆದಾವೆ ಬಾಳೇಮೀನು

ಬೊಬ್ಬೆಯಾ ಹೊಡೆದಾವೆ ಬಾಳೆಮೀನು ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೇ
ತಾನಂದನೋ ಗುಬ್ಬಿ ಸಾರಂಗ ನಗುತಾವೆ

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂಡೈಭೋಗ
ಮೂಡಿ ಬರ್ತಾನೆ ಚಂದಿರರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಮಾ

ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ