ಕಲಿತ ಹುಡುಗಿ ಕುದುರಿ ನಾಡಗಿ - The Indic Lyrics Database

ಕಲಿತ ಹುಡುಗಿ ಕುದುರಿ ನಾಡಗಿ

गीतकार - Folk | गायक - Various | संगीत - Various | फ़िल्म - Folk | वर्ष - 2006

Song link

View in Roman

ಕಲಿತ ಹುಡುಗಿ ಕುದುರಿ ನಾಡಗಿ
ನಡದು ಬರುತಿತ
ಅದನ್ನೂ ಕಂಡ ನಮ್ಮ ಹಳ್ಳಿ ಮಂದಿಗೆ
ದಿಕ್ಕ ತಪ್ಪಿ ಹೋತಾ

ಉಟ್ಟ ಸೀರೆಯ ಕೆಳಗಿನ ದಡಿಯ ಕಸ ಹೊಡೆಯುತಿತ್ತಾ
ಮುನ್ಸಿಪಾಲಿಟಿ ಆಲಿನಕಿಂತಾ ಸ್ವಚ್ಛ ಮಾಡುತಿಟ್ಠಾ
ಜೂಲಪಿ ಬಿಟ್ಟ ಹಿಂದ ರಿಬ್ಬನ್ನು ಬಾಚಿ ಕಟ್ಟಿತ್ತ
ಭರಂತ ನದಿಯೋದ್ರಾಗ ರಿಬ್ಬನ್ನು ಧೀರಕಿ ಹೊಡೆತಿತ್ತ

ಬಣ್ಣದ ಮುಖಾ ಬಡಿದ ಪುಡಿರ್ರು ಹಾರ್ಯಾರಿ ಬರುತಿತ್ತು
ಹಣೆಗೆ ಹಚ್ಚಿದ ಕುಂಕುಮ ಸಣ್ಣಗ ಹಣಕಿ ಹಾಕತಿತ್ತ
ಬಾಲೆಯಿಲ್ಲದ ಬಲಗೈಯ್ಯಂತು ಬಾಣನ ಅಂತಿತ್ತ
Yedagaiyaaga Wrist Watch Badidi Kunthitta

ಎತ್ತ್ರ ಹಿಮ್ಮಡಿ ಚಪ್ಪಲ್ಲೊಮ್ಮೆ ತೊಡರಗಾಲ ಬಡಿತಿತ್ತ
ಮೊಳಕೈಗೊಂಡು ರೊಕ್ಕದ ಪರ್ಸ್ ಜೋತು ಬಿದ್ದಿತ್ತ
ಕಣ್ಣಿನ ನೋಟಕ ಕಾಲಿನ ತಾಳಕ ಎಲ್ಲಿಯ ಪುರುಸೊತ್ತ
ಬಲ್ಲಿಯಂಗ ಬಳುಕೋ ನಡುಬ ನರ್ತನ ನಡೆಸಿತ್ತ
ಕಮ್ಮಾರ ಹುಡುಗ ಕಬ್ಬಿನ ಕಾಸಿ ಬಡಕೊಂಡ ಕುಂತಿತ್ತ
ಹಾಡು ಹೋಗುವ ಹುಡಗಿ ಮ್ಯಾಹ ಅವನ ನೇದರ ಬಿತ್ತ
ಮೈಲ ಎತ್ತಿದ ಕಬ್ಬಿನ ಸುತ್ತಿಗೆ ಪತ್ತಂತ ಕೆಳಗ ಬಿತ್ತ
ಕಬ್ಬಿನ ಮ್ಯಾಯಾಗ ಕುಂದ್ರೂ ಹೊಡೆತ ಕೈಯ್ಯ ಮ್ಯಾಲ ಬಿತ್ತ

ಕಂಬಾರ ಹುಡುಗ ಗಿಡಗಿ ಮಾಡಾಕ ಮನ್ನ ಕಳಸತಿತ್ತಾ
ಚಕ್ಕಂತ ಬಂದ ಹುಡಗಿ ಮೈಲ ಬಿತ್ತ ಅವನ ಚಿತ್ತ
ಬುಡುಕ ಕುಂಟ ಹುಡುಗನ ಹೆಂಡತಿ ನೀರ ಬೆರಸತಿತ್ತ
ಹೆಂಡತಿ ಖಬರ ಇಲ್ಲಾ ತುಳದನ ಸೊಂಟ ಮುರುಡ ಬಿತ್ತ

ಮ್ಯಾಯಾದರ ಹುಡುಗ ಮೆಲ್ಲಗನ್ನೆಲೆ ಬೀದರ ಶೀಲತಿತ್ತ
ಮೂಲಿ ಹೊರಳಿ ಹುಡುಗೀ ಹೋಗುವಾಗ ಅವನ ಕಣ್ಣ ಬಿತ್ತ
ಬೀದರ ಸೀಳಿ ಎರಡೋಲಗಿದ್ದರು ಚೂರಿ ಸೀಳಿ ಬಂತ
ಬಟ್ಟ ಕತ್ತರಿ ಬಿದ್ದಾರು ಅವಗಾಗಲಿಲ್ಲ ಗೊತ್ತಾ

ಶೆಟ್ಟರ ಹುಡುಗ ಯಾಲಕ್ಕಿ ತೂಗಾಕ ತಕ್ಕಡಿ ಹಿಡಿದಿತ್ತ
ಗಿರಾಕಿ ಕೂಡ ಮಾತಾಡುವಾಗ ಹುಡಗಿ ಎದುರು ಬಂತ
ಯಾಲಕ್ಕಿ ತೂಗು ಹಾಕುವ ಕೈಯ್ಯ ಹಾಕುತಿತ್ತ
ಹುಡುಗೀ ಗುಂಗಿನಾಗ ಯಾಲಕ್ಕಿ ಡಬ್ಬಿ ಖಾಲಿ ಆಗಿ ಹೋತಾ

ಸಿಂಪಿಗ್ಯಾರ ಹುಡುಗ ಅಂಗಿ ಹೊಲಿದು ಕಿಸೆ ಹಚ್ಚತಿತ್ತ
ಕಿಸೆ ಕತ್ತರಿಸಿ ಹಚ್ಚೋಮುಂದ ಹುಡುಗಿ ಎದುರು ಬಂಟ
ಹುಡಿಗಿನ ನೋಡಿದ ಹುಡುಗನ ಅಳತಿ ಯರ ಪೇರ ಆಟ
ಯೆಡೆಗೆ ಹಚ್ಚು ಕಿಸಾದ ತೂಕಡಿ ದುಬ್ಬಕ ಹಚ್ಚಿತ್ತ

ಪೂಜಾಗಾರ ಹುಡುಗ ಹನುಮಂತ ದೇವರ ಪೂಜೆಗೆ ನದಿದಿತ್ತ
ಪೂಜಿವ್ಯಾಲೆ ಮೀರಿ ಹೋಗೈತಂತಾ ಗಡಬಡ ಸೊಂತಿತ್ತ
ಬೆಕ್ಕು ಅಡ್ಡ ಹಾಡು ಹೋಗುವಂಗ ಹುಡುಗೀ ಅಡ್ಡ ಬಂದ
ಪೂಜಾ ಮರೆತು ಬಾಯಿ ತೆರೆದು ನಿಂತು ಜೊಲ್ಲ ಸೊರಿತಿತ್ತ

ಬಡಿಗ್ಯಾರ ಹುಡುಗ ಆಲಿನ ಕೂಡ ಉಜ್ಜಗೊಡ್ಡ ಹೊಡಿತಿತ್ತ
ಕೊಡ್ಡದ ಮೈಲ ಉಜ್ಜಗೊಡ್ಡು ಹಿಂದ ಮುಂದಗುತಿತ್ತ
ಬಡಗ್ಯಾನ ಮರೆತು ಆಳು ಆ ಹುಡುಗೀನ ದೊಗ್ಗಿ ನೋಡಿತ್ತ
ಹುಡುಗ್ತಿ ಲಕ್ಷ್ಯಕ್ಕ ಆಲಿನ ದುಬ್ಬ ಕೇತಿ ಕೆಟ್ಟಿ ಹೋತಾ

ಚಡ ಅಂಗಡಿ ಹೊರಗ ಆಳೊಂದು ಭಜಿ ಮಾಡುತಿತ್ತ
ಭಜಿ ಮಾಡಿ ಮಾಡಿ ಹಾಕುವಾಗ ಹುಡುಗೀ ಹಾಡು ಹೋತಾ
ಹುಡುಗೀನ ನೋಡಿದ ಆಳು ಹುಡುಗನ ಜೀವ ಜಾಲ್ ಅಂತಾ
ಹಿಟ್ಟಿನ ಬುಟ್ಯಾಗ ಹಾಕಿವ ಕೈಯ್ಯ ಎಣ್ಣೆಗೆ ಹಾಕಿತ್ತ
ನಾಡಿಗರ ಹುಡುಗನ ಮುಂದೊಂದು ಹನ್ನಣ್ಣ ಮುದುಕ ಕುಂತಿತ್ತಾ
ಹುಡುಗನ ಕತ್ತಿ ಮುದುಕನ ಮೀಸೆ ಕಟ್ ಮಾಡುತಿತ್ತ
ಹಾದಿಲೇ ಹೋಗುವ ಹುಡುಗೀನ ನೋಡ್ತಾ ಮುದುಕಣ್ಣ ಮರೆತಾ
ಲೇ ಅಂಥಾ ವದರುವಾಗ ಮೂಗು ಜಿಗಿದು ಬಿತ್ತ