ಧನಲಕ್ಷ್ಮಿ ದಾಯೆ ತೋರು - The Indic Lyrics Database

ಧನಲಕ್ಷ್ಮಿ ದಾಯೆ ತೋರು

गीतकार - Chi. Udaya Shankar | गायक - P. B. Sreenivas | संगीत - M. R anga Rao | फ़िल्म - Dhanalakshmi | वर्ष - 1977

Song link

View in Roman

ಪಾಲ್ಗಡಲಿನಿಂದುಡಿಸಿ ಹರಿಯ ವರಿಸಿ
ಕರವೀರ ಪುರದಲ್ಲಿ ಬಂದು ನೆಲೆಸಿ
ಗತಿ ನೀನೆ ಯೆಂದವರ ಕೈ ಬಿಡದೆ ಹರಸಿ
ಕಾಪಾಡುವ ತಾಯೇ ಬಾರೆ.. ಕನಿಕರಿಸಿ

ಧನಲಕ್ಷ್ಮಿ ದಾಯೆ ತೋರು ಬಾಮ್ಮಾ
ಅಮ್ಮ ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಕಂಗಳಿಗೆ ಕಾಣಿಸದೆ ಯೆಲ್ಲಿ ಮರೆಯಾಗಿರುವೆ..
ಸಿರಿವಂತರ ಸೆರೆಯ ತೊರೆದು ಬಾರಮ್ಮ

ಧನಲಕ್ಷ್ಮಿ ದಾಯೆ ತೋರು ಬಾ ಮಾ
ಅಮ್ಮ ಸೌಭಾಗ್ಯ ಲಕ್ಷ್ಮಿ ಬಾರಮ್ಮ

ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ
ಬಾಗಿಲಿಗೆ ಬಂದಿರುವ ಭಕುತನ ಬೇಡಿಕೆಯ
ತಡೆದರಡಿ ಪೂರೈಸಿ ಬೇಗ ಸಲಹಮ್ಮ

ಧನ ಲಕ್ಷ್ಮಿ ದಾಯೆ ತೋರು ಬಾ ಮಾ ಅಮ್ಮಾ
ಸೌಭಾಗ್ಯ ಲಕ್ಷ್ಮಿ ಬಾರಮ್ಮ

ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ
ಸುರಲೋಕದ ಪಾರಿಜಾತ ಅರ್ಪಿಸುವೆ
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ
ಸುರಲೋಕದ ಪಾರಿಜಾತ ಅರ್ಪಿಸುವೆ
ಪನ್ನೀರ ಕೋಲದಿಂದ ಹೊನ್ನ ತಾವರೆ ತಂದು
ಸಿರಿಪಾದ ಕಮಲಗಳಿಂದೆ ಪೂಜಿಸುವೆ

ಧನಲಕ್ಷ್ಮಿ ದಾಯೆ ತೋರು ಬಾಮ್ಮಾ
ಅಮ್ಮ ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಕಂಗಳಿಗೆ ಕಾಣಿಸದೆ ಯೆಲ್ಲಿ ಮರೆಯಾಗಿರುವೆ
ಸಿರಿವಂತರ ಸೆರೆಯ ತೊರೆದು ಬಾರಮ್ಮ

ಧನ ಲಕ್ಷ್ಮಿ ದಾಯೆ ತೋರು ಬಾ ಮಾ ಅಮ್ಮಾ
ಸೌಭಾಗ್ಯ ಲಕ್ಷ್ಮಿ ಬಾರಮ್ಮ
ಸೌಭಾಗ್ಯ ಲಕ್ಷ್ಮಿ ಬಾರಮ್ಮ..