ನಿನ್ನೊಲುಮೆ ನಮಗಿರಲಿ ತಂದೆ - The Indic Lyrics Database

ನಿನ್ನೊಲುಮೆ ನಮಗಿರಲಿ ತಂದೆ

गीतकार - R. N. Jayagopal | गायक - P. B. Srinivas, B. K. Sumithra | संगीत - Vijaya Bhaskar | फ़िल्म - Namma Makkalu | वर्ष - 1969

Song link

View in Roman

ಉತ್ತಿಷ್ಟೋ ಉತ್ತಿಷ್ಟ ಗೋವಿಂದಾ
ಉತ್ತಿಷ್ಟ ಗರುಡ ದ್ವಜ
ಉತ್ತಿಷ್ಟ ಕಮಲಾ ಕಂಠ
ತ್ರೈಲೋಕ್ಯಂ ಮಂಗಲಂ ಗುರು

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ

ತಾನೂರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನೀನೆನ್ನ ಅನುಗೋಳಿಸು ತಂದೆ

ಕಾನನದ ಸುಮವೊಂದು ಸೌರಭವಾ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆನ್ನ ತಂದೆ

ಸಿರಿಯು ಸಂಪದ ಬೇಡ
ಯಾವ ವೈಭವ ಬೇಡ
ಸಿರಿಯು ಸಂಪದ ಬೇಡ
ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ

ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆ ಎಂದೇನು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೇ ನೀ ನಡೆಸು ಈ ಬಾಳ ನೌಕೆ

ಯಾವ ನೋವೇ ಬರಲಿ ಎದೆಗುಂದದಿರಲಿ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ