ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ - The Indic Lyrics Database

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ

गीतकार - D. R. Bendre | गायक - Adarsh Adithya, Shamitha Malnad | संगीत - A R Hemanth | फ़िल्म - Hubballi | वर्ष - 2006

Song link

View in Roman

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ
ವಾರದಗ ಮೂರು ಸರ್ತಿ ಬಂದು ಹೋದವ

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ
ವಾರದಗ ಮೂರು ಸರ್ತಿ ಬಂದು ಹೋದವ

ಭಾರಿ ಜರದ ವಾರಿ ರುಮಾಲ ಸುತ್ತಿಕೊಂಡವ
ತುಂಬ ಮೀಸಿ ತೀಡಿಕೋತ ಹುಬ್ಬ ಹರ್ಷವಾ
ಭಾರಿ ಜರದ ವಾರಿ ರುಮಾಲ ಸುತ್ತಿಕೊಂಡವ
ತುಂಬ ಮೀಸಿ ತೀಡಿಕೋತ ಹುಬ್ಬ ಹರ್ಷವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸಿದವ
ಮಾತು ಮಾತಿಗೆ ನಕ್ಕ ನಗಿಸಿ ಆದಿಸ್ಯಾದವ..
ಏನೊ ಅಂದರೆ ಏನೊ ಕಟ್ಟಿ ಹಾಡ ಹಾಡವ

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ..
ವಾರದಗ ಮೂರು ಸರ್ತಿ ಬಂದು ಹೋದವ

ಇರು ಅಂದರ ಬರತೇನಂತ ಎದ್ದು ಹೊರಟಾವ
ಮಾರಿ ತಿಲಗ ಹಾಕಿತೇಂದರೆ ಇದ್ದು ಬಿಡವಾ
ಇರು ಅಂದರ ಬರತೇನಂತ ಎದ್ದು ಹೊರಟಾವ
ಮಾರಿ ತಿಲಗ ಹಾಕಿತೇಂದರೆ ಇದ್ದು ಬಿಡವಾ
ಹಿಡೀ ಹಿಡೀಲೆ ರೊಕ್ಕ ತೆಗದು ಹಿಡಿ ಹಿಡಿ ಅನ್ನವ
ಹಿಡೀ ಹಿಡೀಲೆ ರೊಕ್ಕ ತೆಗದು ಹಿಡಿ ಹಿಡಿ ಅನ್ನವ..
ಖರೆ ಅಂಥ ಕೈ ಮಾಡಿದಾರ ಹಿಡದು ಬೇಡವಾ

ಇನ್ನು ಯಾಕ.. ಇನ್ನು ಯಾಕ..
ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ..
ವಾರದಗ ಮೂರು ಸರ್ತಿ ಬಂದು ಹೋದವ

ಚಹಾದ ಜೋಡಿ ಚೂಡಾದಾಂಗ ನೀ ನನಗಂದವ
ಚೌಡಿಯಲ್ಲಾ ನೀ ಚೂಡಾ ಮಣಿಯಂತ ರಮೀಸಿ ಬಂದವ
ಚಹಾದ ಜೋಡಿ ಚೂಡಾದಾಂಗ ನೀ ನನಗಂದವ
ಚೌಡಿಯಲ್ಲಾ ನೀ ಚೂಡಾ ಮಣಿಯಂತ ರಮೀಸೈ ಬಂದವ
ಬೆರಳಿಗುಂಗುರ ಮೂಗಿನಾಗ ಮೂಗ ಬತ್ತಿತ್ತವ
ಕಣ್ಣಿನಾಗಿನ ಗೊಂಬೆ ಹಾಂಗ ಯೀಎಡ್ಯಾಗ ನಟ್ಟವ

ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ
ವಾರದಗ ಮೂರು ಸಾರಥಿ ಬಂದು ಹೋದವ

ಎಲ್ಲಿ ಮಲ್ಲಿ ಪಾರಿ ತಾರಿ ನೋಡಿರೆಂದ್ರವ್ವಾ
ನಿಂಗಿ ಸಂಗಿ ಸಾವಂತರಿ ಎಲ್ಹಣ ನನ್ನವ
ಎಲ್ಲಿ ಮಲ್ಲಿ ಪಾರಿ ತಾರಿ ನೋಡಿರೆಂದ್ರವ್ವಾ
ನಿಂಗಿ ಸಂಗಿ ಸಾವಂತರಿ ಎಲ್ಹಣ ನನ್ನವ
ಸೆಟ್ಟರ ಹುಡುಗ ಸೆಟಗೊಂಡೊಡ ಅಂತ ನಾನಾ ಜೀವ
ಸೆಟ್ಟರ ಹುಡುಗ ಸೆಟಗೊಂಡೊಡ ಅಂತ ನಾನಾ ಜೀವ..
ಹಾದಿ ಬೀದಿ ಹುಡಕ ತೈತೆ ಬಿಟ್ಟ ಎಲ್ಲ ಹ್ಯಾವ

ಇನ್ನು ಯಾಕ.. ಇನ್ನು ಯಾಕಾ..
ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ..
ವಾರದಗ ಮೂರು ಸರ್ತಿ ಬಂದು ಹೋದವ
ಇನ್ನು ಯಾಕ ಬರಲಿಲ್ಲವ್ವ ಹುಬ್ಬಳ್ಳಿಯವ..
ವಾರದಗ ಮೂರು ಸರ್ತಿ ಬಂದು ಹೋದವ..
ವಾರದಗ ಮೂರು ಸರ್ತಿ ಬಂದು ಹೋದವ..
ವಾರದಗ ಮೂರು ಸರ್ತಿ ಬಂದು ಹೋದವ..ಆ..