ನೀ ಹಿಂಗ ನೋಡಬ್ಯಾಡ ನನ್ನಾ - The Indic Lyrics Database

ನೀ ಹಿಂಗ ನೋಡಬ್ಯಾಡ ನನ್ನಾ

गीतकार - D. R. Bendre | गायक - Various | संगीत - Various | फ़िल्म - Bhavageethegalu | वर्ष - 2012

Song link

View in Roman

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ

ಸಂಸಾರ ಸಾಗರದಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೇ ಗೊತ್ತಿಲ್ಲದಿದ್ದರು ಎಲ್ಲಿ ಅಚ್ಚೆಯ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ ಮುಂದಿನಾಡು ದೇವರ ಚಿತ್ತಾ
ನಾ ತಡಿಲಾರೆ ಅದು ಯಾಕ ನೋಡತಿ ಮತ್ತ ಮತ್ತ ನೀ ಇತ್ತಾ

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ

ತಾಂಬಳ ಹಾಕದ ತುಂಬ ಕೆಂಪು ಗಿಣಿ ಗದಕ ಹಣ್ಣಿನ ಹಂಗ
ಇದ್ದಂಥಾ ತುತಿಯ ಬಣ್ಣೆತ್ತ ಹರಿತು ಯಾವ ಗಳಿಗೆ ಹಿಂಗ?
ಇ ಗಟ್ಟಗಲ್ಲ ಹನಿ ಕಣ್ಣು ಕಂಡು ಮರಿಗೆ ಮರಿಯ ರೀತಿ
ಸವನ ತನ್ನ ಕ್ಯೆ ಸವಾರಿಲ್ಲಿ ಬಂತೆನಗ ಇಲ್ಲಾ ಭೇಟಿ
ನೀ ಹಿಂಗ ನೋಡಬ್ಯಾಡ ನನ್ನಾ

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ

ಇಬ್ಬನಿ ತೊಳೆದರು ಹಾಲವು ಮೆಟ್ಟಿದ ಕಾವಲಿ ಕಂಠಿಯ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣು ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲಾ
ಹುಣ್ಣಿಮಿ ಚಂದಿರನ ಹೆಣ ಬಂತೋ ಮುಗಿಲಾಗ ತೇಲತ ಹಾಗಲ

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ

ನಿನ್ನ ಕಣ್ಣಿಗ ಕಾಲೂರಿ ಮಲೆಯು ನಾಡ ನಡಕ ಹುಚ್ಚು ನಾಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವಕ
ಅತ್ತರೆ ಅತ್ತು ಬಿಡು ಹೊನಲು ಬರಲಿ ನಕ್ಯಕ ಮರಸತಿ ದ್ನೀ ದುಃಖ
ಎದೆ ಬಿರಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ

ನೀ ಹಿಂಗ ನೋಡಬ್ಯಾಡ ನನ್ನಾ
ನೀ ಹಿಂಗ ನೋಡಿದ್ರೆ ನನ್ನಾ
ತಿರುಗಿ ನಾ ಹ್ಯಂಗ ನೋಡಲೇ ನಿನ್ನ