ಕೇಳಿದು ಸುಳ್ಳಾಗ ಬಹುದು - The Indic Lyrics Database

ಕೇಳಿದು ಸುಳ್ಳಾಗ ಬಹುದು

गीतकार - Chi. Udayashankar | गायक - S. Janaki | संगीत - Rajan-Nagendra | फ़िल्म - Rama Lakshmana | वर्ष - 1980

Song link

View in Roman

ಕೇಳಿದು ಸುಳ್ಳಾಗ ಬಹುದು
ನೋಡಿದ್ದು ಸುಳ್ಳಾಗ ಬಹುದು

ಕೇಳಿದು ಸುಳ್ಳಾಗಬಹುದೆ
ನೋಡಿದ್ದು ಸುಳ್ಳಾಗಬಹುದೆ
ನಿಲ್ಲಿಸಿ ಯೋಚಿಸಿದಾಗ
ನಿಜವು ತಿಳಿವುದು
ನಿಲ್ಲಿಸಿ ಯೋಚಿಸಿದಾಗ
ನಿಜವು ತಿಳಿವುದು

ಆಆ.. ಆಆ..

ದೂರದಲ್ಲೊಂದು ಕಾಡಿತ್ತು
ಕಾಡಲಿ ಒಂದು ಮನೆ ಇತ್ತು
ಮುಂಗುಸಿಯೊಂದು ಅಲ್ಲಿತ್ತು
ಮನೆಯನು ಕಾವಲು ಕಾಯಿತು
ಆ ಮನೆಯೊಡತಿ ಗಂಗಮ್ಮ
ತೊಟ್ಟಿಲಲವಳ ಕಂದಮ್ಮ
ಮುಂಗುಸಿಯಲ್ಲದೇ ಬೇರೆನು
ಮಗುವಿನ ಆಟಕೆ ಇಲ್ಲಮ್ಮ..

ಮುಂಗುಸಿಯೊಡನೆ ಪ್ರೀತಿಯಲಿ
ಕಂದನ ಜೊತೆಗೆ ಪ್ರೇಮದಲಿ
ಬಾಳುತಲಿದ್ದಳು ಗಂಗಮ್ಮ
ಮುಂದೇನಾಯ್ತು ಕೇಳಮ್ಮಾ..


ಮನೆಯಲಿ ನೀರು ಮುಗಿದಿರಲು
ಹೊಲೆಯ ಕಡೆಗೆ ಹೊರತಿರಲು
ಕಂಡನು ಇನ್ನು ಮಲಗಿರಲು
ಮುಂಗುಸಿಯನ್ನು ಕೂಗಿದಳು
ಮನೆಯಲಿ ಬೇರೆ ಯಾರಿಲ್ಲ
ಮಗುವಿನ ಜೊತೆಗೆ ಕಾವಲಿರು
ಹೊರಗಡೆ ಯೆಳ್ಳು ಹೋಗದಿರು

ಗಂಗೆಯು ಹೊಳೆಗೆ ಹೊರಟಾಗ
ಬೆಳಿಯಲ್ಲಿದ್ದ ಕರಿ ನಾಗ

ಸಾರ ಸಾರ ಹರಿಯಿತು ರಭಸದಲಿ
ಮನೆಯನು ಸೇರಿತು ನಿಮಿಷದಲಿ

ಮುಂಗುಸಿ ನೋಡಿತು ಹಾವನ್ನು
ತೊಟ್ಟಿಲ ಬಾಳಿಗೆ ಬರುವನು
ಕಾಳಗ ನಡೆಯಿತು ರೋಷದಲಿ

ಸೋತಿತು ಹಾವು ಜಗದಲಿ
ಮುಂಗುಸಿ ಗೆಲುವಿನ ಹರುಷದಲಿ
ಹಾವಿನ ಪ್ರಾಣವ ಹೀರಿತ್ತು
ಬಯಲಿ ರಕ್ತವು ಚಿನುಗಿತ್ತು....

ಗಂಗೆಯು ನೀರನು ತರುತಿರಲು
ಕೈ ಬಾಲೆ ನಾದವ ಕೇಳಲು
ಮುಂಗುಸಿ ಬಾಗಿಲ ಬಲಿ ಬರಲು
ಬಯಲಿ ರಕ್ತದ ಕಲೆ ಇರಲು..
ಬೆಚ್ಚುತ ಗಂಗೆಯು ನೋಡಿದಾಳು
ಮಗುವನು ಕೊಂಡಿದೆ ಇದು ಯೆಂದು
ಮುಂಗುಸಿಯನ್ನು ಹಚ್ಚಿದಳು
ಅಳುತ ಒಳಗೆ ಒದಿದಳು

ತೊಟ್ಟಿಲ ಕಂಡನು ನಗುತಿಟ್ಟು
ನೆಲದಲಿ ಹಾವು ಸತ್ತಿತ್ತು
ದುಡುಕಿದ ಬುಡ್ಡಿಗೆ ಬಲಿಯಾಗಿ
ಮುಂಗುಸಿ ಕಥೆಯು ಮುಗಿದಿತ್ತು..

ಕೇಳಿದು ಸುಳ್ಳಾಗ ಬಹುದು
ನೋಡಿದ್ದು ಸುಳ್ಳಾಗ ಬಹುದು

ಕೇಳಿದ್ದು ಸುಳ್ಳಾಗಬಾಹುದು
ನೋಡಿದ್ದು ಸುಳ್ಳಾಗಬಾಹುದು
ನಿಲ್ಲಿಸಿ ಯೋಚಿಸಿದಾಗ
ನಿಜವು ತಿಳಿವುದು..

ನಿಲ್ಲಿಸಿ ಯೋಚಿಸಿದಾಗ
ನಿಜವು ತಿಳಿವುದು