ಕಮಲದ ಮೊಗದೊಳೆ ಕಮಲದ ಕನ್ನೊಳೆ - The Indic Lyrics Database

ಕಮಲದ ಮೊಗದೊಳೆ ಕಮಲದ ಕನ್ನೊಳೆ

गीतकार - Chi Udayashankar | गायक - S. Janaki | संगीत - Shankar-Ganesh | फ़िल्म - Hosa Ithihaasa | वर्ष - 1984

Song link

View in Roman

ಕಮಲದ ಮೊಗದೊಳೆ ಕಮಲದ ಕನ್ನೊಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲದ ಮೊಗದೊಳೆ ಕಮಲದ ಕನ್ನೊಳೆ
ಕಮಲವ ಕೈಯಲ್ಲಿ ಹಿಡಿದೊಳೆ

ಕಮಲಾ ನಾಭನ ಹೃದಯ ಕಮಲದಲಿ ನಿಂತೋಳೆ
ಕಮಲೆ ನೀ ಕರ ಮುಗಿವೇ ಬಾಮ್ಮಾ
ಪೂಜೆಯ ಸ್ವೀಕರಿಸಿ ದಯಾ ಮಾಡಿಸಮ್ಮ

ಕಮಲದ ಮೊಗದೊಳೆ ಕಮಲದ ಕನ್ನೊಳೆ
ಕಮಲವ ಕೈಯಲ್ಲಿ ಹಿಡಿದೊಳೆ

ಕಾವೇರಿ ನೀರಾ ಅಭಿಷೇಕವಾಗಿ
ನಿನಗಾಗಿ ನಾ ತಂದೇನಮ್ಮ
ಕಂಪನ್ನು ಚಲ್ಲೋ ಸುಮಾ ರಾಶಿ ಇಂದಾ
ಹೂಮಾಲೆ ಕಟ್ಟಿರುವೇನಮ್ಮ
ಬಂಗಾರ ಕಾಲ ಗೆಜ್ಜೆ ನಾದ
ನಮ್ಮ ಮನೆಯಲ್ಲವ ತುಂಬುವಂತೆ
ಬಂಗಾರ ಕಾಲ ಗೆಜ್ಜೆ ನಾದ
ನಮ್ಮ ಮನೆಯಲ್ಲವ ತುಂಬುವಂತೆ
ನಲಿಯುತ ಕುಣಿಯುತ ಒಲಿದು ಬಾ ನಮ್ಮ ಮನೆಗೆ ಬಾ

ಕಮಲದ ಮೊಗದೊಳೆ ಕಮಲದ ಕನ್ನೊಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲಾ ನಾಭನ ಹೃದಯ ಕಮಲದಲಿ ನಿಂತೋಳೆ
ಕಮಲೆ ನಿ ಕರ ಮುಗಿವೇ ಬಾಮ್ಮಾ
ಪೂಜೆಯ ಸ್ವೀಕರಿಸಿ ದಯಾ ಮಾಡಿಸಮ್ಮ

ಶ್ರೀದೇವಿ ಬಾ ಮಾ ಧನಲಕ್ಷ್ಮೀ ಬಾ ಮಾ
ಮನೆಯಲ್ಲಾ ಬೆಳೆಕಾಗಿ ಮಾಡು
ದಯಾತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಾಗ್ಯ ನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯೆ
ವರ ಮಹಾಲಕ್ಷ್ಮಿಯೇ ಹರಸು
ಸ್ಥಿರವಾಗಿ ಬಂದಿಲ್ಲಿ ನೆಲೆಸು ತಾಯೆ
ವರ ಮಹಾಲಕ್ಷ್ಮಿಯೇ ಹರಸು
ಕರವನು ಮುಗಿಯುವೆ ಆರತಿ ಈಗ ಬೆಳಗುವೆ

ಕಮಲದ ಮೊಗದೊಳೆ ಕಮಲದ ಕನ್ನೊಳೆ
ಕಮಲವ ಕೈಯಲ್ಲಿ ಹಿಡಿದೊಳೆ
ಕಮಲಾ ನಾಭನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರ ಮುಗಿವೇ ಬಾಮ್ಮಾ
ಪೂಜೆಯ ಸ್ವೀಕರಿಸಿ ದಯಾ ಮಾಡಿಸಮ್ಮ