ನಾ ಹುಡುಕೋ ನಾಲೆ - The Indic Lyrics Database

ನಾ ಹುಡುಕೋ ನಾಲೆ

गीतकार - V. Nagendra Prasad | गायक - Nihal | संगीत - Arjun Janya | फ़िल्म - Premier Padmini | वर्ष - 2019

Song link

View in Roman

ನಾ ಹುಡುಕೋ ನಾಲೆ
ನೆನ್ನೆಗಳ ಕೇಳದು..
ನೀ ನಡೆಯೋ ಅಂತ್ಯ..
ಮೈಲಿಗಲ್ಲು ಹೇಳು..
ಈ ಪಯಣ ಹೀಗೇ..
ನಾನೇ ಮಾಲಿಕಾ ನಂಗೆ..
ಈ ಬದುಕೇ ಹೀಗೇ..
ನಾನೇ ರೂಪಕ ನಂಗೆ..

ನೆನಪ ಎಸೆದು ಮುಂದೆ ನಡೆವೆ
ಬರುವಾ ಸಮಯ ಅವರು.. ಇನ್ನು ಮುಂದೆ ನಂದೇ ನನ್ನದೇ
ಹೊಸದು ಕನಸು ನಾನೇ ಹೊಸೆದು..
ಅದರ ಕಡೆಗೆ ನಾ ನಡೆವೆ ಮುಂದೆ ಎಲ್ಲ ನಂದೇ ನಂದೇ

ಜಾರೋ ಜಲಪಾತ ಕೊನೆಯಲ್ಲ
ಮುಂದೆ ಹರಿಯೋದು ನಾ ಕಂಡೆ..
ಬೀಳೋ ಹಿಮರಾಶಿ ಸಾಯೋಲ್ಲ..
ಭೂಮಿ ಹಾಡಾಯಿತು ನಾ ಕಂಡೆ...
ಈ ಜಗವೇ ನಮ್ಮ..
ನಿತ್ಯ ಪಾತ ಶಾಲೆಯು..
ಈ ಬದುಕೇ ಹೀಗೇ..
ಒಂದು ಪಾಕಶಾಲೆಯು..

ಸಿಹಿಯೋ ಕಹಿಯೋ ಒಗರೆ ಇರಲೀ
ಕಲಸಿ ಬಲಸಿ ರುಚಿಯಾದ ಬದುಕು ಮಾಡಿಕೊಳ್ಳುವೆ
ಚಲಿಯೋ ಮಳೆಯೋ ಬಿಸಿಲೆ ಬರಲಿ
ಅದರ ಜೊತೆಗೇ ನಾ ಬಿಡದೆ ಬಿಡದೆ ನಡೆ ನಡೆವೆ

ನಾ ಹುಡುಕೋ ನಾಲೆ..
ನೆನ್ನೆಗಳ ಕೆಳದು..
ನೀ ನಡೆಯೋ ಎಂದು..
ಮೈಲಿಗಲ್ಲು ಹೇಳು..