ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು - The Indic Lyrics Database

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು

गीतकार - R. N. Jayagopal | गायक - P. B. Srinivas | संगीत - Viswanathan-Ramamoorthy | फ़िल्म - Vijayanagarada Veeraputhra | वर्ष - 1961

Song link

View in Roman

ಅಹಹಾ ಹ್ಮ್ಮ್ ಓಹೋ ಓಹೋ ಓ...

ಹರಳೆ ರಾಸಿಗಳಂತೆ
ಹಾಲಗಡಲ ಅಳಿಯಂತೆ..
ಆಗಸದೆ ತೇಳುತಿದೆ ಮೋಡ..
ನೆರೆ ನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ..ಈ..
ಹಸಿ ಹಸಿರು ವನರಾಜಿ ನೋಡಾ..

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ಣಾಟವಿಡುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ಣಾಟವಿಡುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪರ ಕೀರ್ತಿಯೇ..

ಮಾತೆ ತುಂಗಭದ್ರೆ..
ಹರಿಯುತಿಹಳು ಇಲ್ಲೀ..
ಮನವನ ಪಾಪವನು ತೊಳೆವ ಕಲ್ಪವಲ್ಲಿ
ಮನವನ ಪಾಪವನು ತೊಳೆವ ಕಲ್ಪವಲ್ಲಿ

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ಣಾಟವಿಡುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪರ ಕೀರ್ತಿಯೇ..

ದೇವ ವಿರೂಪಾಕ್ಷ..ಆ..
ಈವ ನಮಗೇ ರಕ್ಷಾ..ಆ..
ಜೀವಿಗೆ ತಾ ನೀಡುವವನು ಧರ್ಮದ ದೀಕ್ಷಾ
ಜೀವಿಗೆ ತಾ ನೀಡುವವನು ಧರ್ಮದ ದೀಕ್ಷಾ

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ಣಾಟವಿಡುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪರ ಕೀರ್ತಿಯೇ..

ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ..
ಹಕ್ಕ ಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ

ಅಪರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ಣಾಟವಿಡುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪರ ಕೀರ್ತಿಯೇ..