ದೇಶ ದೇಶದೊಳಗೇ ನಮ್ಮ ದೇಶ ಚಂದ - The Indic Lyrics Database

ದೇಶ ದೇಶದೊಳಗೇ ನಮ್ಮ ದೇಶ ಚಂದ

गीतकार - Vijaya Narasimha | गायक - S. P. Balasubrahmanyam, S. Janaki | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಣ್ಣು ಚಿನ್ನ ಮಾತು ಚೆನ್ನ
ಮಂಧಿ ಒಂದಾಗೆ ಆನಂದ
ಮಂಧಿ ಒಂದಾಗೆ ಆನಂದ

ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ ಮಂದಿ ಒಂದಾಗೆ ಆನಂದ

ಜಗ ಜಗಸಿ ಬಂದವ್ಳೆ ನಗು ನಗುತಾ ನಿಂತವ್ಳೆ
ಮಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಜಗ ಜಗಸಿ ಬಂದವ್ಳೆ ನಗು ನಗುತಾ ನಿಂತವ್ಳೆ
ಮಾಲಕ್ಷ್ಮಿ ನಮ್ಮ ಹಳ್ಳಿಯಾಗೆ

ಕೆರೆ ಕಟ್ಟೆ ತುಂಬೈತೆ ಬ್ಯಾಡ ಹೊಟ್ಟೆ ಬಿರಿದೈತೆ
ಕೆರೆ ಕಟ್ಟೆ ತುಂಬೈತೆ ಬ್ಯಾಡ ಹೊಟ್ಟೆ ಬಿರಿದೈತೆ
ಕೇಸರಿನ ಕೈ ಕಡಗ ಕಟ್ಟೈತೆ..
ಕೇಸರಿನ ಕೈ ಕಡಗ ಕಟ್ಟೈತೆ..

ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೆ ಆನಂದ
ಮಂದಿ ಒಂದಾಗೆ ಆನಂದ

ಸಾಲ್ದ ಬಾಲೆಯ ಬೀಸಿ ಜೀತದೆ ಜೀವ ತೇಸೊ
ಸಾಲ್ದ ಬಾಲೆಯ ಬೀಸಿ ಜೀತದೆ ಜೀವ ತೇಸೊ
ಸಾವ್ಕಾರ್ಕೆ ಹಮ್ಮು ಇನ್ನಿಲ್ಲ
ಜವರಾಯನ ಹಂಗೆ ಜಬರ್ದಸ್ತು ಮಾಡೋ
ಜಮೀಂದಾರ್ನ ಜೋರು ಉಸಿರಿಲ್ಲ
ಜಮೀಂದಾರ್ನ ಜೋರು ಉಸಿರಿಲ್ಲ

ಹೂಲೊವ್ಂಗೆ ಭೂಮಿ ಬೆಳೆಯೊಂಗೆ ಹೂವ
ಹೂಲೊವ್ಂಗೆ ಭೂಮಿ ಬೆಳೆಯೊಂಗೆ ಹೂವ
ಭೂತಾಯಿ ನಮ್ಮ ಹೆತ್ತವ್ವ
ಭೂತಾಯಿ ನಮ್ಮ ಹೆತ್ತವ್ವ

ದಿಲ್ಲಿಗೆ ತೋವ್ರು ಮನೆ ಹಳ್ಳಿಯಂತೆ
ದಿಲ್ಲಿಗೆ ತೋವ್ರು ಮನೆ ಹಳ್ಳಿಯಂತೆ ಆಹಾ
ನೇಗಿಲ ಯೋಗಿ ತೌರ ಒಡೆಯನಂತೆ
ಆಲಿಲ್ಲವಂತೆ ಅರಸಿಲ್ಲವಂತೆ
ಮೆಳಿಲ್ಲವಂತೆ ಕೀಳಿಲ್ಲವಂತೆ
ರಾಮರಾಜ್ಯ ಮರಳಿ ಹುಟ್ಟಿ ಬಂದೈತಂತೆ
ಅನ್ನಪೂರ್ಣೆ ಕರುಣೆ ನಮಗೇ ಸಿಕ್ಕೈತಂತೆ
ಆಹಾ ಅನ್ನಪೂರ್ಣೆ ಕರುಣೆ ನಮಗೇ ಸಿಕ್ಕೈತಂತೆ

ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ದೇಶದೊಳಗೇ ನಮ್ಮ ದೇಶ ಚಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಣ್ಣು ಚಿನ್ನ ಮಾತು ಚೆನ್ನ
ಮಂಧಿ ಒಂದಾಗೆ ಆನಂದ
ಮಂಧಿ ಒಂದಾಗೆ ಆನಂದ..