ಸಾಕು ಯೆನ್ನುವನೇ ಸಾಹುಕಾರನು - The Indic Lyrics Database

ಸಾಕು ಯೆನ್ನುವನೇ ಸಾಹುಕಾರನು

गीतकार - Vijaya Narasimha | गायक - S. P. Balasubrahmanyam | संगीत - G. K. Venkatesh | फ़िल्म - Sose Thanda Sowbhagya | वर्ष - 1977

Song link

View in Roman

ಸಾಕು ಯೆನ್ನುವನೇ ಸಾಹುಕಾರನು ಇನ್ನು ಬೇಕು ಇನ್ನು ಯೆಂದು
ಬಡವ ಭಿಕಾರಿ ತಾನಗೇ ಅಪಕಾರೀ
ಶ್ರೀಮಂತನ ಆದರೇನು ಭಿಕ್ಷುಕನೆ ತಾನೆ?
ಹಾನ್ ಶ್ರೀಮಂತನ್ ಆದರೇನು ಭಿಕ್ಷುಕನೇ ತಾನೇ?

ಸಾಕು ಯೆನ್ನುವನೆ ಸಾಹುಕಾರನು

ಅಷ್ಟಿದ್ದರೇ ಇಷ್ಟು ಬೇಕು ಅಂಥಾನೇ ನೊಂದು ಬೆಂದು
ಇಷ್ಟಾದರೇ ಇನ್ನಷ್ಟೆಂದು ಅಳುತಾನೆ ಸಾಲದೆಂದು
ಊರನ್ನೇ ನುಂಗೋಣಂತೆ ಹಗಲಿರುಳು ಒಂದೇ ಚಿಂತೆ
ಶಾಂತಿಯೇ ಇಲ್ಲದೇ ದಿನವು ಅಲೆವಾ

ಬಡವ ಭಿಕಾರಿ ತಾನಗೇ ಅಪಕಾರೀ
ಶ್ರೀಮಂತನ ಆದರೇನು ಭಿಕ್ಷುಕನೆ ತಾನೆ?

ಸಾಕು ಯೆನ್ನುವನೆ ಸಾಹುಕಾರನು

ತಿನ್ನೋಕೆ ಅಣ್ಣವೂ ಬೇಕು ನೇರಲೊಂದು ಇರಲೇಬೇಕು
ಓರಗಲ್ಲೇ ಕರಗಿಸುವಂಥ ಅತಿ ಆಸೆ ಯಾಕೆ ಬೇಕು
ಮೈಯಲ್ಲಿ ಬಲವಿರುವಾಗ ಶ್ರಮದಿಂದ ಬಳಬೇಕು
ಮೈಯಲ್ಲಿ ಬಲವಿರುವಾಗ ಶ್ರಮದಿಂದ ಬಳಬೇಕು
ದುಡಿಯದೆ ಮೋಸದಿ ಮುಳುಗಿವಾತ

ಬಡವ ಭಿಕಾರಿ ತಾನಗೇ ಅಪಕಾರೀ
ಶ್ರೀಮಂತನ ಆದರೇನು ಭಿಕ್ಷುಕನೆ ತಾನೆ?
ಹಾನ್ ಶ್ರೀಮಂತನ್ ಆದರೇನು ಭಿಕ್ಷುಕನೇ ತಾನೇ?

ಸಾಕು ಯೆನ್ನುವನೆ ಸಾಹುಕಾರನು

ಊರೆಲ್ಲ ದೋಚಿ ದೋಚಿ ಯೆಲ್ಲಿದ್ದುವೆ ಯೆಲ್ಲವನ್ನು
ಹಸಿದಾಗ ಅನ್ನದಂತೆ ತಿನ್ನುವ ಚಿನ್ನವನ್ನು
ಹುಲಿಯಂತೆ ಬಾಳದೆನೆ ನರಿಯಂತೆ ಆದರೆ ನೀನು
ಹುಲಿಯಂತೆ ಬಾಳದೆನೆ ನರಿಯಂತೆ ಆದರೆ ನೀನು
ಯೆಲ್ಲರ ಶಾಪ ಸುಮ್ಮನೆ ಬಿಡದು
ಹಣ ನಿನ್ನ ಬಂದು ಕಾಪಾಡದೆಂದು
ಶ್ರೀಮಂತನ ಆದರೇನು ಭಿಕ್ಷುಕನೆ ನೀನು
ಶ್ರೀಮಂತನ ಆದರೇನು ಭಿಕ್ಷುಕನೆ ನೀನು

ಸಾಕು ಯೆನ್ನುವನೇ ಸಾಹುಕಾರನು ಇನ್ನು ಬೇಕು ಇನ್ನು ಯೆಂದು
ಬಡವ ಭಿಕಾರಿ ತಾನಗೇ ಅಪಕಾರೀ
ಶ್ರೀಮಂತನ ಆದರೇನು ಭಿಕ್ಷುಕನೆ ತಾನೆ?
ಹಾನ್ ಶ್ರೀಮಂತನ್ ಆದರೇನು ಭಿಕ್ಷುಕನೇ ತಾನೇ?