ಕಣ್ಣು ಕಣ್ಣು ಕಾದಾಡುತ ಇರಲಿ - The Indic Lyrics Database

ಕಣ್ಣು ಕಣ್ಣು ಕಾದಾಡುತ ಇರಲಿ

गीतकार - Promad Maravanthe | गायक - Vasuki Vaidhav | संगीत - Vasuki Vaidhav | फ़िल्म - Doordarshana | वर्ष - 2022

Song link

View in Roman

ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿ ಮಾತು ಉಸಿರೆ ಆಡಲಿ

ಕಣ್ಣು ಕಣ್ಣು ಕಾದಾಡುತ ಇರಲಿ
ಬಾಕಿ ಕನಸು ಎದುರೆ ಬೀಳಲಿ

ಬಂದಿರುವ ಹೆಜ್ಜೆಗಳ
ಬಚ್ಚಿಡು ಮರೆಯಲಿ
ಹಿಂದಿರುಗಿ ಹೊರಡಲು
ಮರೆತೆ ಹೋಗಲಿ

ಸನಿಹವೆ ಸಾಗುವ
ಸಿಹಿ‌ ಸಿಹಿ ಯೋಗವ
ಉಳಿಸು ಹೀಗೆ…..

(ಚರಣ)

ಮರೆಯಾಗಿ ಇರುವ
ನೆನೆದಾಗ ಬರುವ
ನಯವಾದ ನಸುಕು ನೀನೆನೆ

ತುದಿಗಾಲು ಬರೆವ
ನೂರಾರು ಕಥೆಯ
ನವಿರಾದ ಪುಟವು ನಿಂದೇನೆ….

ದಿನವು ನಿನದೆ ಸಿಹಿ ವಾರ್ತೆ ತರುವ ಗಾಳಿ
ಎದೆಯ ಸವರಿ ಉಸಿರೆ ಆಗಲಿ…………

ಅರಿಯದ ಮೌನವ
ಅಳೆಯುವ ಧ್ಯಾನವ
ಕಲಿಸು….ನೀ…ನು…….